ಕರಾಚಿ: ಬಾಬರ್ ಅಜಂ ಅವರು ಪಾಕಿಸ್ತಾನ ತಂಡದ ಸೀಮಿತ ಓವರ್‌ಗಳ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಅವರು ನಾಯಕತ್ವ ತ್ಯಜಿಸುತ್ತಿರುವುದು ಇದು ಎರಡನೇ ಸಲ. ಈ ಹಿಂದೆಯೂ ಒಮ್ಮೆ ನಾಯಕತ್ವ ಬಿಟ್ಟಿದ್ದ ಅವರು ಮತ್ತೆ ಮರಳಿದ್ದರು.

ಸೀಮಿತ ಓವರ್‌ಗಳ ತಂಡದ ನಾಯಕತ್ವವನ್ನು ಮೊಹಮ್ಮದ್ ರಿಜ್ವಾನ್ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಬಾಬರ್ ಅವರು ತಮ್ಮ ನಿರ್ಧಾರವನ್ನು ಎಕ್ಸ್ ಮೂಲಕ ಬಹಿರಂಗಪಡಿಸಿದ್ದಾರೆ.

‘ನಾನು ನಿಮ್ಮೆಲ್ಲರೊಂದಿಗೆ ಇವತ್ತು ಒಂದು ಸುದ್ದಿ ಹಂಚಿಕೊಳ್ಳುತ್ತಿರುವೆ. ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿರುವೆ. ಹೋದ ತಿಂಗಳು ಪಿಸಿಬಿ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡಿದ್ದೆ. ಈ ತಂಡವನ್ನು ಮುನ್ನಡೆಸಿದ್ದು ನನಗೆ ಸಿಕ್ಕ ದೊಡ್ಡ ಗೌರವ. ಇದೀಗ ನಾಯಕತ್ವವನ್ನು ಬಿಟ್ಟುಕೊಟ್ಟು, ಆಟದ ಮೇಲೆ ಹೆಚ್ಚು ಗಮನ ನೀಡಲು ಇದು ಸಕಾಲ’ ಎಂದು ಬಾಬರ್ ಬರೆದಿದ್ದಾರೆ.

ಪ್ರತ್ಯೇಕ ನಾಯಕತ್ವ:

ಮೂರು ಮಾದರಿಗಳ ಕ್ರಿಕೆಟ್ ತಂಡಕ್ಕೂ ಪ್ರತ್ಯೇಕ ನಾಯಕರನ್ನು ನೇಮಕ ಮಾಡುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿದೆ.

ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಆಯ್ಕೆ ಸಮಿತಿಗೆ ತಂಡಗಳನ್ನು ರಚಿಸಲು ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.