ಹಾವೇರಿ: ಹಾನಗಲ್ ತಾಲ್ಲೂಕು ನರೇಗಲ್ಲ ಗ್ರಾಮದ ದ್ಯಾಮವ್ವನಗುಡಿ ಪೂಜಾರಿಯೊಬ್ಬರು ‘ನಮ್ಮ ಜಾತಿಯ ಕನ್ಯೆ ಹುಡುಕಿಕೊಡಿ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ/ಪಿಡಿಒಗೆ ಬರೆದ ಮನವಿಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದ್ಯಾಮಣ್ಣ ಕಮ್ಮಾರ ಎಂಬ ಸುಮಾರು 60 ವರ್ಷದ ವ್ಯಕ್ತಿಯೊಬ್ಬ ‘ನನಗೆ ಮದುವೆಯಾಗಿಲ್ಲ. ಕಾರಣ ನಾನು ಎಷ್ಟು ಹುಡುಕಿದರೂ ಕನ್ಯೆ ಸಿಗುತ್ತಿಲ್ಲ. ಅಡುಗೆ ಮಾಡಲು ಯಾರೂ ಇಲ್ಲ. ಆದ್ದರಿಂದ ನನಗೆ ಮದುವೆಯಾಗುವ ಆಸೆಯಾಗಿದೆ. ನೀವು ನನಗೆ ಕನ್ಯೆ ಹುಡುಕಿಸಿ ಮದುವೆ ಮಾಡಬೇಕು’ ಎಂದು ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಮನವಿ ಪತ್ರವನ್ನು ಸ್ವೀಕರಿಸಿದೆ ಎಂದು ಗ್ರಾಮ ಪಂಚಾಯ್ತಿಯವರು ಸೀಲು ಮತ್ತು ಸಹಿಯನ್ನು ಹಾಕಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.