ಕಲಬುರಗಿ: ಇಲ್ಲಿನ ಕಲಬುರಗಿ–ಯಾದಗಿರಿ ಕೇಂದ್ರ ಸಹಕಾರ ಬ್ಯಾಂಕ್ 2021–22ನೇ ಸಾಲಿನಲ್ಲಿ ಸಾಲ ಪಾವತಿಗೆ ಇದ್ದ ನಿಗದಿತ ಅವಧಿ ಮೀರಿದ ಬಳಿಕ ಸಾಲ ಪಾವತಿಸಿದ 65,996 ರೈತರಿಂದ ಶೇ 11.75ರ ಬಡ್ಡಿ ದರದಲ್ಲಿ ₹ 21.67 ಕೋಟಿ ಹಣ ವಸೂಲಿ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರ ಲಿಖಿತ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಸಚಿವರು, ‘ರೈತರಿಗೆ ₹ 192.47 ಕೋಟಿ ಸಾಲವನ್ನು ನೀಡಲಾಗಿತ್ತು. ₹ 3 ಲಕ್ಷವರೆಗಿನ ಅಲ್ಪಾವಧಿ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ₹ 10 ಲಕ್ಷವರೆಗಿನ ಮಧ್ಯಮಾವಧಿ ಸಾಲವನ್ನು ಶೇ 3ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಈ ಗಡುವು ಮುಗಿದ ಬಳಿಕ ಪಾವತಿಸಲು ವಿಫಲರಾದ ರೈತರಿಗೆ ಶೇ 11.75ರಷ್ಟು ಬಡ್ಡಿ ಆಕರಿಸಲಾಗಿದೆ. ಅದರ ಮೊತ್ತ ಶೇ 21.67 ಕೋಟಿ ಆಗಿದೆ’ ಎಂದು ತಿಳಿಸಿದ್ದಾರೆ.

ಕಿಸಾನ್ ಕ್ರೆಡಿಟ್ ಸಾಲ ಪಡೆದ 12 ತಿಂಗಳೊಳಗಾಗಿ ಸಾಲ ಮರುಪಾವತಿ ಮಾಡಿದಲ್ಲಿ ಯಾವುದೇ ಬಡ್ಡಿ ಇರುವುದಿಲ್ಲ. ಅವಧಿ ಮೀರಿದ ಬಳಿಕ ಪಾವತಿಸಿದರೆ ಸಾಲ ನೀಡಿದ ದಿನಾಂಕದಿಂದ ಶೇ 11.75ರ ಬಡ್ಡಿದರ ವಿಧಿಸಲಾಗುತ್ತದೆ’ ಎಂದಿದ್ದಾರೆ. ಕಲಬುರಗಿ–ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಬಡ್ಡಿದರದಲ್ಲಿ 82,061 ರೈತರಿಗೆ ₹ 439.81 ಕೋಟಿ ಸಾಲ ನೀಡಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.