ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಶಾದಿಪುರ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಾಯಬಣ್ಣ ಅವರನ್ನು ಕರ್ತವ್ಯಲೋಪ ಆರೋಪದ ಮೇರೆಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಸಕ್ರೆಪ್ಪಗೌಡ ಜಿ.ಬಿರಾದಾರ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.

ಮುಖ್ಯ ಶಿಕ್ಷಕ ಮೇಲಧಿಕಾರಿಗಳ ಅನುಮತಿ ಪಡೆಯದೇ ರಜೆಯ ಮೇಲೆ ಹೋಗಿರುವುದು ಮತ್ತು ಮಧ್ಯಾಹ್ನದ ಬಿಸಿ ಊಟ ಸಮರ್ಪಕವಾಗಿ ವಿತರಿಸದಿರುವುದು, ಬಿಸಿ ಊಟದ ಆಹಾರ ಸಾಮಗ್ರಿ ಖರ್ಚು ಹಾಗೂ ಹಣಕಾಸಿನ ಖರ್ಚಿನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಕರ್ತವ್ಯಲೋಪದ ಕಾರಣ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ನ 17ರಂದು ಶಾಲೆಗೆ ಹಠಾತ್ ಭೇಟಿ ನೀಡಿದ್ದರು. ಅಲ್ಲಿನ ಬಿಸಿ ಊಟ ನಿರ್ವಹಣೆಯ ಅಸಮರ್ಪಕತೆ ಕಂಡು ವರದಿ ನೀಡುವಂತೆ ತಾ.ಪಂ. ಇಒ ಶಂಕರ ರಾಠೋಡ ಅವರಿಗೆ ಸೂಚಿಸಿದ್ದರು. ಇಒ ಅವರ ವರದಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಮತ್ತು ತಾ.ಪಂ. ಯೋಜನಾಧಿಕಾರಿಗಳು ಜಂಟಿ ಪರಿಶೀಲನಾ ವರದಿ ನೀಡಿದ್ದರು. ಅದರಂತೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಇಒ ಆದೇಶದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.