ಕಲಬುರಗಿ: ‘ಗ್ರಾಮ ಸ್ವರಾಜ್ಯ’ ಮಹಾತ್ಮ ಗಾಂಧಿ ಪರಿಕಲ್ಪನೆ. ಸ್ವಾಯತ್ತ ಆಡಳಿತ ಅದರ ಆಶಯ. ಆ ಆಶಯ ಸಾಕಾರದ ಸಾಂಸ್ಥಿಕ ರೂಪ ಪಂಚಾಯತ್ರಾಜ್ ವ್ಯವಸ್ಥೆ; ಅದರಡಿ ಬರುವ ಗ್ರಾಮ ಪಂಚಾಯಿತಿ ವ್ಯವಸ್ಥೆ.

ಅಂತೆಯೇ ಜಿಲ್ಲೆಯಲ್ಲಿ 261 ಗ್ರಾಮ ಪಂಚಾಯಿತಿಗಳಿವೆ. ಅದಕ್ಕೆ ಚುನಾಯಿತ ಆಡಳಿತ ಮಂಡಳಿ, ಅಧಿಕಾರಿಗಳು, ಸಿಬ್ಬಂದಿ ಎಲ್ಲವೂ ಇದ್ದಾರೆ. ಆದರೆ, ಅವು ಅಭಿವೃದ್ಧಿಯ ಚಾಲಕಶಕ್ತಿ ‘ಆರ್ಥಿಕ’ ಬಲದ ಕೊರತೆ ಎದುರಿಸುತ್ತಿವೆ. ಪಂಚಾಯಿತಿಗಳಿಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಹಲವು ಮೂಲಗಳಿವೆ. ಅದರಲ್ಲಿ ತೆರಿಗೆ ಪ್ರಮುಖ ಆದಾಯದ ಮೂಲ. ಆದರೆ, ತೆರಿಗೆ ವಸೂಲಿಯೇ ಪಂಚಾಯಿತಿಗಳಿಗೆ ಗುಡ್ಡವಾಗಿದೆ. ತೆರಿಗೆ ಸಂಗ್ರಹದಲ್ಲಿ ಪ್ರತಿ ವರ್ಷ ಹಿನ್ನಡೆ ಸಾಮಾನ್ಯವಾಗಿದೆ. ಅದರ ಪರಿಣಾಮ ಅಭಿವೃದ್ಧಿಯಲ್ಲೂ ಅವು ತೆವಳುತ್ತಿದ್ದು, ಅಭಿವೃದ್ಧಿಗೆ ಏದುಸಿರು ಬಿಡುತ್ತಿವೆ!

‘ನಿಗದಿತ ಅಭಿವೃದ್ಧಿ ಕೆಲಸಗಳು ಬಿಟ್ಟು ಮಿಕ್ಕೆಲ್ಲ ವೆಚ್ಚಗಳನ್ನು ಪಂಚಾಯಿತಿಗಳು ಸ್ವಂತ ಸಂಪನ್ಮೂಲದಿಂದಲೇ ಭರಿಸಬೇಕು. ಆ ಸಂಪನ್ಮೂಲ ಸಂಗ್ರಹಕ್ಕೆ ಆಸ್ತಿ ತೆರಿಗೆಯೇ ಪ್ರಮುಖ ಮೂಲ. ಕಚೇರಿ ಆಡಳಿತ ವೆಚ್ಚ, ಚರಂಡಿ–ರಸ್ತೆ ದುರಸ್ತಿ, ನೀರಿನ ಪೈಪ್ ದುರಸ್ತಿ, ನೀರಿನ ಘಟಕಗಳ ಶುಚಿತ್ವ, ವಿದ್ಯುತ್ ದೀಪಗಳ ಅಳವಡಿಕೆ, ಜಾತ್ರೆ, ಸಭೆಗಳು, ಸಮಾರಂಭ ನಡೆದಾಗೆಲ್ಲ ಬಳಸುವ ದಿನಗೂಲಿಗಳ ಸಂಬಳ ಎಂದೆಲ್ಲ ವೆಚ್ಚಗಳ ಪಟ್ಟಿ ಉದ್ದಕ್ಕೆ ಬೆಳೆಯುತ್ತದೆ. ಜನ ತೆರಿಗೆಯನ್ನೇ ಕಟ್ಟದಿದ್ದರೆ ಅವುಗಳನ್ನೆಲ್ಲ ಸರಿದೂಗಿಸುವುದು ಹೇಗೆ’ ಎಂಬುದು ಜಿಲ್ಲೆಯ ಹಲವು ಪಿಡಿಒಗಳು, ಕಾರ್ಯದರ್ಶಿಗಳ ಎದುರಿನ ಪ್ರಶ್ನೆ.

ಜಿಲ್ಲೆಯ ಒಟ್ಟು ಪಂಚಾಯಿತಿಗಳಿಂದ 2024–25ನೇ ಆರ್ಥಿಕ ವರ್ಷದಲ್ಲಿ ₹ 37.72 ಕೋಟಿ ತೆರಿಗೆ ಸಂಗ್ರಹ ಗುರಿಯಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಹುತೇಕ ಎಂಟು ತಿಂಗಳು ಮುಗಿಯುತ್ತ ಬಂದರೂ, ಶೇ 25ರಷ್ಟೂ ತೆರಿಗೆ ಸಂಗ್ರಹವಾಗಿಲ್ಲ. ನ.22ರ ಲೆಕ್ಕಚಾರದಂತೆ ಜಿಲ್ಲೆಯಲ್ಲಿ 23.48ರಷ್ಟು ತೆರಿಗೆ ಸಂಗ್ರಹವಾಗಿದೆ. ಜಿಲ್ಲೆಯಲ್ಲಿ ಕಮಲಾಪುರ ತಾಲ್ಲೂಕಿನ ಶ್ರೀಚಂದ ಪಂಚಾಯಿತಿಯಲ್ಲಿ ಗರಿಷ್ಠ ಶೇ 92.63ರಷ್ಟು ಹಾಗೂ ಚಿಂಚೋಳಿ ತಾಲ್ಲೂಕಿನ ಕರ್ಚಖೇಡ ಪಂಚಾಯಿತಿಯಲ್ಲಿ ಕನಿಷ್ಠ ಶೇ 0.09ರಷ್ಟು ತೆರಿಗೆ ಸಂಗ್ರಹವಾಗಿದೆ.

ಜಿಲ್ಲೆಯ 261 ಗ್ರಾಮ ಪಂಚಾಯಿತಿಗಳ ಪೈಕಿ ಶೇ 50ರಷ್ಟು ತೆರಿಗೆ ಸಂಗ್ರಹಿಸಿದ ಪಂಚಾಯಿತಿಗಳ ಸಂಖ್ಯೆ 10 ಮೀರಲ್ಲ. ಜಿಲ್ಲೆಯ 22ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಶೇ 10ಕ್ಕೂ ಕಡಿಮೆ ತೆರಿಗೆ ಸಂಗ್ರಹವಾಗಿದೆ.

ಇದು ಪ್ರಸಕ್ತ ಸಾಲಿನ ಕಥೆ. 2024–25ನೇ ಸಾಲಿನ ಲೆಕ್ಕ ಪಕ್ಕಕ್ಕಿಟ್ಟು, ಬರೀ ಹಳೆಯ ವರ್ಷಗಳ ಹಿಂಬಾಕಿಯನ್ನು ಲೆಕ್ಕಹಾಕಿದರೆ, ಜಿಲ್ಲೆಯಲ್ಲಿ ₹ 109.51 ಕೋಟಿ ತೆರಿಗೆ ಬಾಕಿ ಉಳಿದಿದೆ. ಇಷ್ಟು ದೊಡ್ಡ ಮೊತ್ತ ಪಂಚಾಯಿತಿಗಳ ಬೊಕ್ಕಸ ಸೇರಿದರೆ ಅಭಿವೃದ್ಧಿಗೆ ವೇಗ ಸಿಕ್ಕೀತು.

ಪೂರಕ ಮಾಹಿತಿ: ಜಗನ್ನಾಥ ಶೇರಿಕಾರ, ತೀರ್ಥಕುಮಾರ ಬೆಳಕೋಟಾ, ನಿಂಗಣ್ಣ ಜಂಬಗಿ.

‘ವರ್ಷದಿಂದ ವರ್ಷಕ್ಕೆ ಆಶಾದಾಯಕ’

‘2022–23ರಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಒಟ್ಟು ತೆರಿಗೆ ಸಂಗ್ರಹ ಗುರಿ ಬರೀ ₹ 13.55 ಕೋಟಿಗಳಷ್ಟಿತ್ತು. ಬಳಿಕ ಕರ ಹೆಚ್ಚಾಯಿತು. ಹೊಸದಾಗಿ ಸ್ವತ್ತುಗಳ ಸಮೀಕ್ಷೆಯೂ ನಡೆಯಿತು. ಅದರಿಂದ ಜಿಲ್ಲೆಯ ಎಲ್ಲ ಪಂಚಾಯಿತಿಗಳ ವಾರ್ಷಿಕ ತೆರಿಗೆ ಸಂಗ್ರಹ ಗುರಿ ಬಹುತೇಕ ಮೂರು ಪಟ್ಟುಗಳಷ್ಟು ಹೆಚ್ಚಿ ₹ 37.72 ಕೋಟಿಗಳಷ್ಟಾಗಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ಸಿಂಗ್ ಮೀನಾ. ‘ತೆರಿಗೆ ಸಂಗ್ರಹ ಗುರಿ ಹೆಚ್ಚಿದಂತೆ ಸಂಗ್ರಹದಲ್ಲೂ ಆಶಾದಾಯಕ ಪ್ರಗತಿಯಿದೆ. 2022–23ರಲ್ಲಿ ₹ 10.40 ಕೋಟಿ ಸಂಗ್ರಹವಾಗಿತ್ತು. 2023–24ರಲ್ಲಿ ₹ 11.03 ಕೋಟಿ ಸಂಗ್ರಹವಾಗಿತ್ತು. 2024–25ರ ಆರ್ಥಿಕ ವರ್ಷದ ನ.22ರ ತನಕ ₹ 8.85 ಕೋಟಿ ಸಂಗ್ರಹವಾಗಿದೆ. ಸದ್ಯ ತೆರಿಗೆ ಸಂಗ್ರಹ ಅಭಿಯಾನ ನಡೆಸುತ್ತಿದ್ದು ಪ್ರಮುಖವಾಗಿ ವಾಣಿಜ್ಯ ಕೈಗಾರಿಕಾ ಹಾಗೂ ವಸತಿ ರಹಿತ ಸ್ವತ್ತುಗಳ ತೆರಿಗೆ ವಸೂಲಿಗೆ ಒತ್ತು ನೀಡಲಾಗುವುದು. ಬಾಕಿ ಕರ ವಸೂಲಿಗೂ ಅಗತ್ಯ ಕ್ರಮವಹಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳ ಕಸರತ್ತು

ವಿಶೇಷ ಅಭಿಯಾನ ಗುರಿ ನಿಗದಿ ಸರಣಿ ಮೇಲುಸ್ತುವಾರಿ ಸಭೆ... ಹೀಗೆ ಗ್ರಾಮ ಪಂಚಾಯಿತಿಗಳ ಕರ ಸಂಗ್ರಹಕ್ಕೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕ್ರಮವಹಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳು ಸಿಮೆಂಟ್ ಕಂಪನಿಗಳಂಥ ಕೈಗಾರಿಕಾ ಘಟಕಗಳಿಂದ ತೆರಿಗೆ ವಸೂಲಿಗೆ ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳು ನಿಗಾವಹಿಸಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ 50 ಗ್ರಾಮ ಪಂಚಾಯಿತಿಗಳ ಪಟ್ಟಿ ಸಿದ್ಧಪಡಿಸಿ ಕರ ವಸೂಲಿ ಮಾಡಲಾಗುತ್ತಿದೆ. ಅದಕ್ಕೆ ಸ್ವತಃ ಜಿಲ್ಲಾ ಪಂಚಾಯಿತಿ ಸಿಇಒ ನಿಗಾ ವಹಿಸಿದ್ದಾರೆ. ಪ್ರತಿವಾರ ಪ್ರಗತಿ ಪರಿಶೀಲಿಸುತ್ತಿದ್ದಾರೆ.

ಅಭಿಯಾನ ಇಂದಿನಿಂದ

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಗೆ ನ.25ರಿಂದ ನ.29ರ ತನಕ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅತೀ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಪಂಚಾಯಿತಿಗಳು ಮತ್ತು ಸ್ವತ್ತುಗಳ ಪಟ್ಟಿ ಸಿದ್ಧಪಡಿಸಬೇಕು. ಈ ಅಭಿಯಾನದ ಅವಧಿಯಲ್ಲಿ ತೆರಿಗೆ ವಸೂಲಾತಿಗೆ ಕ್ರಮವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒಗಳು ಪಿಡಿಒಗಳು ಹಾಗೂ ಬಿಲ್ ಕಲೆಕ್ಟರ್ಗಳಿಗೆ ಜಿಲ್ಲಾ ಪಂಚಾಯಿತಿ ಸುತ್ತೋಲೆ ಮೂಲಕ ಸೂಚಿಸಿದೆ.

ಪಂಚಾಯಿತಿ ಆದಾಯಕ್ಕೆ ಕಂಪನಿ ‘ಬಲ’

ಚಿಂಚೋಳಿ: ತಾಲ್ಲೂಕಿನಲ್ಲಿ ಬಹುತೇಕ ಪಂಚಾಯಿತಿಗಳು ಪ್ರಸ್ತಕ ಸಾಲಿನ ತೆರಿಗೆ ಸಂಗ್ರಹದಲ್ಲಿ ಹಿಂದಿವೆ. ಕರ್ಚಖೇಡ ಪಂಚಾಯಿತಿ ಜಿಲ್ಲೆಯಲ್ಲೇ ಕೊನೇ ಸ್ಥಾನದಲ್ಲಿದೆ. ಆದರೆ ತಾಲ್ಲೂಕಿನ ಗರಗಪಳ್ಳಿ ಗ್ರಾಮ ಪಂಚಾಯಿತಿ ಪ್ರಸಕ್ತ ಸಾಲಿನ ತೆರಿಗೆ ವಸೂಲಿಯಲ್ಲಿ ಶೇ 79ರಷ್ಟು ಸಾಧನೆ ಮಾಡಿದೆ. ಈ ಗ್ರಾ.ಪಂ. ವಾರ್ಷಿಕ ₹ 49 ಲಕ್ಷ ತೆರಿಗೆ ವಸೂಲಿ ಗುರಿ ಹೊಂದಿದೆ. ಇದರಲ್ಲಿ ₹ 40 ಲಕ್ಷ ಚೆಟ್ಟಿನಾಡ್ ಸಿಮೆಂಟ್ ಕಂಪನಿಯೊಂದರಿಂದಲೇ ಬರಬೇಕು. ಇನ್ನುಳಿದ ₹ 9 ಲಕ್ಷ ಪಂಚಾಯಿತಿ ವ್ಯಾಪ್ತಿಯ ಜನ ಪಾವತಿಸಬೇಕು. ಸಿಮೆಂಟ್ ಕಂಪನಿಯಿಂದ ತೆರಿಗೆ ಸಂಗ್ರಹಿಸುವಲ್ಲಿ ಪಂಚಾಯಿತಿ ಯಶಸ್ವಿಯಾಗಿದ್ದು ಉತ್ತಮ ಪ್ರಗತಿಗೆ ಕಾರಣ. ‘ಗ್ರಾ.ಪಂ.ಗೆ ತೆರಿಗೆ ಬಾಬ್ತಿಗೆ ಜಮೆಯಾದ ₹ 40 ಲಕ್ಷ ಅನುದಾನ ಸಾರ್ವಜನಿಕ ಅಗತ್ಯ ಕೆಲಸಗಳು ಹಾಗೂ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡಲು ಬಳಸಲಾಗಿದೆ’ ಎನ್ನುತ್ತಾರೆ ಗರಗಪಳ್ಳಿ ಪಿಡಿಒ ರಾಮಕೃಷ್ಣ ಕೊರಡಂಪಳ್ಳಿ.

ತೆರಿಗೆ ಕಟ್ಟಲು ನಿರುತ್ಸಾಹ

ಶಹಾಬಾದ್: ‘ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜನ ಸ್ವಯಂ ಪ್ರೇರಿತರಾಗಿ ತೆರಿಗೆ ಕಟ್ಟುತ್ತಿಲ್ಲ. ಸರ್ಕಾರಿ ಯೋಜನೆ ಸೌಲಭ್ಯ ಪಡೆಯುವಾಗ ದಾಖಲಾತಿಗಳು ಬೇಕಾದಾಗ ಮಾತ್ರ ತೆರಿಗೆ ಕಟ್ಟುತ್ತಾರೆ. ಪ್ರತಿ ತಿಂಗಳು ವಿದ್ಯುತ್ ಶುಲ್ಕ ಪಾವತಿಸುವಂತೆ ವರ್ಷಕ್ಕೊಮ್ಮೆ ನೀರು ಆಸ್ತಿ ಕರವನ್ನು ಜನ ಸ್ವಯಂಪ್ರೇರಿತವಾಗಿ ಕಟ್ಟಿದರೆ ಗ್ರಾಮಸ್ವರಾಜ್ಯಕ್ಕೆ ಆರ್ಥಿಕ ಬಲ ಸಿಗುತ್ತದೆ’ ಎಂಬುದು ಶಹಾಬಾದ್ ತಾಲ್ಲೂಕಿನ ವಿವಿಧ ಪಂಚಾಯಿತಿ ಅಧ್ಯಕ್ಷರು ಪಿಡಿಒಗಳ ಅಂಬೋಣ.

ತೆರಿಗೆ ಪಾವತಿಯಲ್ಲಿ ಮುಂಚೂಣಿ

ಕಮಲಾಪುರ: ತಾಲ್ಲೂಕಿನ ಶ್ರೀಚಂದ ಹಾಗೂ ಕುರಿಕೋಟಾ ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿವೆ. ಆದರೆ ಮಿಕ್ಕ ಪಂಚಾಯಿತಿಗಳು ಹಿಂದುಳಿದಿವೆ. ‘ಕರ ಕಟ್ಟಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಜನಕ್ಕೆ ಮನವರಿಕೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸವಿದ್ದರೂ ಕರ ಪಾವತಿ ಮಾಡಿದ ಬಳಿಕವೇ ಅವರ ಕೆಲಸ ಮಾಡಿಕೊಡುತ್ತಿದ್ದೇವೆ. ಇಂಥ ಕ್ರಮಗಳ ಫಲವಾಗಿ ಶ್ರೀಚಂದ ಹಾಗೂ ಕುರಿಕೋಟಾ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗಿದೆ’ ಎಂದು ಉಭಯ ಪಂಚಾಯಿತಿಗಳ ಪಿಡಿಒ ಅಭಿಜಿತ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.