ವಾಡಿ: ಮುಂಗಾರು ಹಂಗಾಮಿನ ತೊಗರಿ, ಹತ್ತಿ ಬೆಳೆಗಳಿಗೆ ಜಲಸಂಕಷ್ಟ ಎದುರಾಗಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.

ಬೆಳೆಗಳ ಸಾಲುಗಳಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದು ಬೇರುಕೊಳೆ ರೋಗ ಶುರುವಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

ಚಿತ್ತಾಪುರ ತಾಲ್ಲೂಕಿನಲ್ಲಿ 18,900 ಹೇಕ್ಟೆರ್ ತೊಗರಿ, 2,500 ಹೇಕ್ಟೆರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದ್ದು ಸತತ ಮಳೆಯಿಂದ ರೋಗ ಬಿದ್ದು ಕಳಾಹೀನಗೊಂಡಿವೆ.

ಹೂವು ತುಂಬಿಕೊಂಡು ಕಾಯಿ ಕಟ್ಟುವ ಹಂತದಲ್ಲಿದ್ದ ಹತ್ತಿ ಈಗ ಅತಿವೃಷ್ಟಿಯಿಂದ ಸಮಸ್ಯೆಗೆ ಸಿಲುಕಿದೆ. ಹೂವು, ಕಾಯಿಗಳು ಉದುರಿ ಬೀಳುತ್ತಿವೆ. ಬೆಳೆ ಸಾಲುಗಳ ಮಧ್ಯೆ ಉದುರಿ ಬಿದ್ದಿರುವ ರಾಶಿ ರಾಶಿ ಹೂವುಗಲೂ ರೈತರ ನಿದ್ದೆಯನ್ನೇ ಕಿತ್ತುಕೊಂಡಿವೆ. ಮಳೆ ಹೀಗೆ ಮುಂದುವರಿದರೆ ಇಡೀ ಬೆಳೆ ಸರ್ವನಾಶವಾಗುವ ಭೀತಿ ಹೆಚ್ಚಾಗಿದೆ.

ನೀರು ಹಿಡಿದಿಟ್ಟುಕೊಳ್ಳುವ ಕಪ್ಪು ಭೂಮಿಯಲ್ಲಿನ ತೊಗರಿ ಗಿಡಗಳು ಒಣಗಿ ನಿಲ್ಲುತ್ತಿವೆ. ಹಳದಿ ಬಣ್ಣಕ್ಕೆ ತಿರುಗುತ್ತಿರುವ ಎಲೆಗಳು ರೋಗಕ್ಕೆ ಸಾಕ್ಷಿಯಾಗಿವೆ. ಬೆಳೆ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ರೈತರಿಗೆ ಜಮೀನಿನಿಂದ ನೀರು ಹೊರಸಾಗಿಸದ ಹೊರತು ಅನ್ಯ ಮಾರ್ಗವಿಲ್ಲದಂತಾಗಿದೆ.

ಹಲಕರ್ಟಿ, ಚಾಮನೂರು, ರಾವೂರು, ಬಳವಡಗಿ, ಅಲಹಳ್ಳಿ, ತರಕಸ್ಪೇಟ್, ಇಂಗಳಗಿ, ಕೊಲ್ಲೂರು, ನಾಲವಾರ ಗ್ರಾಮಗಳ ರೈತರು ಮಳೆಯ ಅಬ್ಬರಕ್ಕೆ ನಲುಗಿ ಹೋಗಿದ್ದು ಬೆಳೆ ಉಳಿಸಿಕೊಳ್ಳುವ ಕಸರತ್ತಿಗೆ ಮುಂದಾಗುತ್ತಿದ್ದಾರೆ.

4 ಎಕರೆಯಲ್ಲಿ ಬಿತ್ತಿರುವ ಹತ್ತಿ ಬೆಳೆ ನೀರಿನಿಂದ ತುಂಬಿಹೋಗಿದ್ದು ಹೂವು ಕಾಯಿಗಳು ಉದುರುತ್ತಿವೆ. ಇಳುವರಿಗೆ ದೊಡ್ಡ ಸಂಕಷ್ಟ ಎದುರಾಗಿದ್ದು ದಿಕ್ಕು ತೋಚುತ್ತಿಲ್ಲ
ದೊಡ್ಡಸಾಬಣ್ಣ ಗೊಡಗ ಲಾಡ್ಲಾಪುರ ರೈತ

ಹತ್ತಿ ಬೆಳೆಯಲ್ಲಿ

ಹಸಿ ನಟೆ ನಿರ್ವಹಣೆ ಕ್ರಮಗಳು

ಭೂಮಿಯಲ್ಲಿ ಅತಿಯಾದ ಮಳೆಯ ನೀರು ಬಸಿದು ಹೊಗುವಂತೆ ಬಸಿಗಾಲುವೆ ನಿರ್ಮಿಸುವುದು. ಕಾಪರ್ ಆಕ್ಸಿಕ್ಲೋರೈಡ್ 25 ಗ್ರಾಂ ಮತ್ತು ಬೇವು ಮಿಶ್ರಿತ ಯೂರಿಯಾ 100 ಗ್ರಾಂ 10 ಲೀಟರ್ ನೀರಿನಲ್ಲಿ ಬೆರೆಸಿ ನೆನೆಯುವಂತೆ ಮಾಡಿ ಸಿಂಪಡಿಸಬೇಕು. ಅಥವಾ ಕಾರ್ಬನ್ ಡೈಜಿಂ 20ಗ್ರಾಂ. ಹಾಗೂ ಯೂರಿಯಾ 100 ಗ್ರಾಂ ಪ್ರತಿ 10 ಲೀಟರ್ ನೀರಿಗೆ ಬೆರೆಸಿ ಬುಡಭಾಗ ಮತ್ತು ಕವಲುಗಳು ನೆನೆಯುವಂತೆ ಸಿಂಪಡಿಸಬೇಕು. ಬಿಸಿಲಿನ ಅವಧಿಯಲ್ಲಿ ಬೆಳೆಯ ಸಾಲಿನಲ್ಲಿ ಎಡೆಕುಂಟೆ ಹೊಡೆಯುವುದರಿಂದ ಗಿಡದ ಉಸಿರಾಟ ಕ್ರಿಯೆಗೆ ಸಹಕಾರಿಯಾಗಲಿದೆ. ನಿಧಾನ ಹಂತದಲ್ಲಿ ಹಸಿ ನೆಟೆ ಗಿಡಗಳು ಮಳೆಯ ನಂತರ ಸೂರ್ಯನ ಸೂಕ್ತ ತಾಪಮಾನದ ವಾತವರಣಕ್ಕೆ ಹೊಂದಿಕೊಂಡು ಚೇತರಿಸಿ ಬೆಳವಣಿಗೆ ಕಂಡಿದ್ದು ಧೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.