ಕಲಬುರಗಿ: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಿ–ಕಬ್ಬಲಿಗ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡುವ ಭರವಸೆ ನೀಡಿ ಮತ ಪಡೆದು, ಈಗ ಸೇರಿಸದೇ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ’ ಎಂದು ಸಮಾಜ ಸೇವಕ ಸುಭಾಷಚಂದ್ರ ಬೆನಕನಳ್ಳಿ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕೇಂದ್ರ ಸರ್ಕಾರ ತಳವಾರ ಹಾಗೂ ಪರಿವಾರ ಎಂಬ ಉಪ ಪಂಗಡಗಳನ್ನು ಮಾತ್ರ ಎಸ್‌ಟಿಗೆ ಸೇರಿಸಿದೆ. 5 ದಶಕಗಳಿಂದ ಕೋಲಿ ಸಮಾಜದ ಒಳ ಪಂಗಡ ಸೇರ್ಪಡೆಗೆ ಹೋರಾಟ ನಡೆಯುತ್ತಿದೆ. ಆದರೂ ಯಾವುದೇ ಸರ್ಕಾರಗಳು ಸ್ಪಂದಿಸುತ್ತಿಲ್ಲ’ ಎಂದು ಅವರು ದೂರಿದರು.

‘ರಾಜ್ಯದ ಬಸವಕಲ್ಯಾಣ, ಸಿಂದಗಿ ಉಪ ಚುನಾವಣೆಯಲ್ಲಿ ಮೀಸಲಾತಿ ಕುರಿತು ಭರವಸೆ ನೀಡದರೂ ಈಡೇರಿಸಿಲ್ಲ. ಈಗಾಗಲೇ ಕರ್ನಾಟಕ ಸರ್ಕಾರ ಟೋಕರೆ, ಕೋಳಿ, ಡೋರ್, ಕೋಳಿ ಪರ್ಯಾಯ ಪದವನ್ನು ಸಂವಿಧಾನದ 342(2) ಕ್ಕೆ ಸೇರಿಸಲು ಶಿಫಾರಸು ಮಾಡಿದೆ. ಆದರೂ ಸಮಾಜದ ಪರ್ಯಾಯ ಪದಗಳನ್ನು ಸೇರ್ಪಡೆ ಮಾಡಿಲ್ಲ’ ಎಂದು ಅವರು ಹೇಳಿದರು.

‘ಮಾತು ತಪ್ಪಿದ ಬಿಜೆಪಿ ಸರ್ಕಾರಕ್ಕೆ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ ಲಕ್ಷ್ಮಣರಾವ್ ಬೆನಕನಳ್ಳಿ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.