ಕಲಬುರಗಿ: ವರ್ಷವಿಡಿ ಕಷ್ಟಪಟ್ಟು ಬೆಳೆಸಿದ ಕಬ್ಬಿಗೆ ಸೂಕ್ತ ಬೆಲೆ ಸಿಗಬೇಕು ಎಂಬ ಆಶಾಭಾವನೆಯಲ್ಲಿ ರೈತರಿದ್ದರೆ, ಕಾರ್ಖಾನೆ ಮಾಲೀಕರು ರೈತರ ಬೇಡಿಕೆಗೆ ತಕ್ಕ ಬೆಲೆ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದರಿಂದಾಗಿ ಕಬ್ಬಿಗೆ ದರ ನಿಗದಿ ಮಾಡುವಲ್ಲಿ ಹಗ್ಗಜಗ್ಗಾಟ ಮುಂದುವರಿದೆ.

ನವೆಂಬರ್ 8ರಿಂದಲೇ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಆರಂಭ ಮಾಡಬೇಕು ಎಂದು ಸಕ್ಕರೆ ಸಚಿವಾಲಯ ಆದೇಶ ಹೊರಡಿಸಿದೆ. ಅದರಂತೆ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳು ಆರಂಭವಾಗಿ ವಾರಗಳೇ ಕಳೆದಿವೆ. ಆ ಕಾರ್ಖಾನೆಗಳು ಸರ್ಕಾರ ನಿಗದಿ ಮಾಡಿದ ಎಫ್ಆರ್ಪಿ ಬೆಲೆಯನ್ನು ಒಪ್ಪಿ ಪ್ರತಿ ಟನ್ಗೆ ಹೆಚ್ಚುವರಿಯಾಗಿ ₹200 ನೀಡಿ, ಪ್ರತಿ ಟನ್ ಕಬ್ಬಿಗೆ ₹3000ದಿಂದ ₹3200ರವರೆಗೆ ದರ ನಿಗದಿ ಮಾಡಿವೆ.

ಕಳೆದ ವರ್ಷ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಿದ ಸಕ್ಕರೆ ಇಳುವರಿಯ ಆಧಾರದ ಮೇಲೆ 2024–25ನೇ ಸಾಲಿಗೆ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ, ಮೊದಲ ಕಂತಿನ ರೂಪದಲ್ಲಿ ಭೂಸನೂರ ಎನ್.ಎಸ್.ಎಲ್ ಶುಗರ್ಸ್ ಕಾರ್ಖಾನೆಗೆ ₹ 3,264, ಅಫಜಲಪುರ ತಾಲ್ಲೂಕಿನ ಚವಡಾಪುರ ಕೆ.ಪಿ.ಆರ್ ಶುಗರ್ಸ್ ಕಾರ್ಖಾನೆಗೆ ₹ 3,357, ಅಫಜಲಪುರ ತಾಲ್ಲೂಕಿನ ಹವಳಗಾ ರೇಣುಕಾ ಶುಗರ್ಸ್ ಮತ್ತು ಯಡ್ರಾಮಿ ತಾಲ್ಲೂಕಿನ ನಾಗರಹಳ್ಳಿಯ ಉಗಾರ ಶುಗರ್ಸ್ ಕಾರ್ಖಾನೆಗೆ ₹3,151 ಎಫ್ಆರ್ಪಿ ದರ ನಿಗದಿಪಡಿಸಿದ್ದಾರೆ.

ಆದರೆ, ಜಿಲ್ಲೆಯಲ್ಲಿರುವ ನಾಲ್ಕು ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬು ನೀಡಿದ ರೈತರಿಗೆ ಹಿಂದಿನ ವರ್ಷದ ಎಫ್ಆರ್ಪಿ ದರದಲ್ಲಿ ಹಣ ನೀಡಿಲ್ಲ. ಕಳೆದ ಸಾಲಿಗಿಂತ ಈ ಬಾರಿ ಇಳುವರಿ ಕಡಿಮೆ ತೋರಿಸಿ ಎಫ್ಆರ್ಪಿ ದರ ನಿಗದಿ ಮಾಡುವಲ್ಲಿ ಮೋಸ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಗಳ ಕಾರ್ಖಾನೆಗಳ ಹಾಗೇ ರೈತ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಹಣ ನೀಡಿ ಪ್ರತಿ ಟನ್ ಕಬ್ಬಿಗೆ ಪ್ರಥಮ ಕಂತಾಗಿ ₹3,000 ನೀಡಬೇಕು ಎನ್ನುತ್ತಾರೆ ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ರಮೇಶ ಹೂಗಾರ.

ನವೆಂಬರ್ 8ರಂದು ಜಿಲ್ಲಾಧಿಕಾರಿ, ಕಾರ್ಖಾನೆಗಳ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿ ಎರಡು ದಿನಗಳ ಒಳಗಾಗಿ ನಿರ್ಧಾರ ತಿಳಿಸಿ ಕಾರ್ಖಾನೆ ಆರಂಭ ಮಾಡಲು ತಿಳಿಸಿ, 10 ದಿನ ಕಳೆದರೂ ಸಹ ಸ್ಪಷ್ಟವಾದ ಉತ್ತರ ಮಾತ್ರ ಬಂದಿಲ್ಲ.

ಕಳೆದ ವರ್ಷ ನವೆಂಬರ್ 1ರಿಂದ ಕಾರ್ಖಾನೆ ಆರಂಭವಾಗಿತ್ತು. ಈ ವರ್ಷ ಈಗಾಗಲೇ ಕಬ್ಬಿನ ಗ್ಯಾಂಗ್ ಬಂದು 15 ದಿನಗಳೇ ಕಳೆದಿವೆ. ಆದರೂ ಕಾರ್ಖಾನೆಗಳು ಆರಂಭವಾಗದಿರುವುದಿಂದ ಕಾರ್ಮಿಕರು ಕೆಲಸವಿಲ್ಲದೇ ಕುಳಿತ್ತಿದ್ದಾರೆ. ಈಗಾಗಲೇ ಕಬ್ಬು ಕಟಾವಿಗೆ ಬಂದಿದೆ. ಇನ್ನಷ್ಟು ದಿನ ವಿಳಂಬವಾದರೆ ತೂಕದಲ್ಲಿ ವ್ಯತ್ಯಾಸವಾಗಿ ರೈತರು ನಷ್ಟ ಅನುಭವಿಸಲಿದ್ದಾರೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಇಳುವರಿ ಆಧಾರದ ಮೇಲೆ ದರ, ರೈತರಲ್ಲಿ ಆತಂಕ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾರ್ಖಾನೆಗಳ ಸಕ್ಕರೆ ಉತ್ಪಾದನಾ ಇಳುವರಿ ಕಡಿಮೆ ಬಂದಿದೆ. ಕಳೆದ ದರಕ್ಕಿಂತ ಈ ಬಾರಿಯ ದರ ಕಡಿಮೆಯಾಗಬಹುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಸಕ್ಕರೆ ಕಾರ್ಖಾನೆಗಳ ಇಳುವರಿ ಆಧಾರ ಮೇಲೆ ಎಫ್ಆರ್ಪಿ ದರ ನಿಗದಿ ಮಾಡಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಬೇರೆ ಜಿಲ್ಲೆಗಳಂತೆ ಎಫ್ಆರ್ಪಿಗಿಂತ ಅಧಿಕ ನೀಡಬೇಕು
–ಶರಣಬಸಪ್ಪ ಮಮಶೆಟ್ಟಿ ರೈತ ಮುಖಂಡ

ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರು ಎರಡು ದಿನಗಳಲ್ಲಿ ದರ ನಿಗದಿ ಮಾಡಿ ಕಾರ್ಖಾನೆ ಆರಂಭಿಸಬೇಕು. ಇಲ್ಲವಾದರೆ ಕಾರ್ಖಾನೆಗಳ ಮುಂದೆ ಪ್ರತಿಭಟನೆ ಮಾಡಲಾಗುವುದು
–ರಮೇಶ ಹೂಗಾರ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

‘ದರ ನಿಗದಿಗಾಗಿ ಸಭೆ’

‘ದರ ನಿಗದಿ ಮಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಸಾಗಾಣಿಕೆ ಹಾಗೂ ಕಾರ್ಮಿಕರ ಕೂಲಿ ರೈತರು ಪಾವತಿ ಮಾಡಿದರೆ ಸರ್ಕಾರ ನಿಗದಿ ಮಾಡಿದ ಎಫ್ಆರ್ಪಿಯಂತೆ ಕಬ್ಬು ಖರೀದಿಸಲು ತಯಾರಿದ್ದೇವೆ ಎಂದು ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಭೀಮರಾಯ ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ರೈತರು ಇದಕ್ಕೆ ಒಪ್ಪದೆ ಕಾರ್ಖಾನೆಗಳೇ ಸಾಗಾಣಿಕೆ ಹಾಗೂ ಕಟಾವು ಸರಬರಾಜು ಬಿಲ್ ಪಾವತಿ ಮಾಡಬೇಕು ಎನ್ನುತ್ತಿದ್ದಾರೆ. ಕಳೆದ ಬಾರಿಗಿಂತ ಈ ವರ್ಷ ಸಕ್ಕರೆ ಇಳುವರಿ ಪ್ರಮಾಣ ಕಡಿಮೆಯಾಗಿರುವುದರಿಂದ ದರ ನಿಗದಿಯಲ್ಲಿ ಸಮಸ್ಯೆಯಾಗುತ್ತಿದೆ. ಸಮಸ್ಯೆ ಬಗೆಹರಿದರೆ ಕಾರ್ಖಾನೆಗಳು ಆರಂಭವಾಗಲಿವೆ’ ಎಂದು ಹೇಳಿದರು.

ರೈತರ ಪ್ರಮುಖ ಬೇಡಿಕೆಗಳು

ಎಫ್ಆರ್ಪಿ ದರ ನಿಗದಿಯಲ್ಲಿ ಅನ್ಯಾಯವಾಗಿದ್ದು ಸರಿಪಡಿಸಬೇಕು.

ರೈತರ ಸಮ್ಮುಖದಲ್ಲಿಯೇ ಕಬ್ಬಿನ ಇಳುವರಿ ತಪಾಸಣೆ ಮಾಡಿ.

ಸಾಗಾಣಿಕೆ ವೆಚ್ಚ ಹಾಗೂ ಕಾರ್ಮಿಕರ ಕೂಲಿ ಹಣ ಕಾರ್ಖಾನೆ ಭರಿಸಬೇಕು.

ಹಿಂದಿನ ಬಾಕಿ ಬಿಲ್ ಪಾವತಿಸಬೇಕು.

ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.