ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವಹೇಳನಕಾರಿ ಹೇಳಿಕೆ: ಯತಿ ನರಸಿಂಹಾನಂದ ವಿರುದ್ಧ ಮೂರು ಎಫ್‌ಐಆರ್

Published : 5 ಅಕ್ಟೋಬರ್ 2024, 21:08 IST
Last Updated : 5 ಅಕ್ಟೋಬರ್ 2024, 21:08 IST
ಫಾಲೋ ಮಾಡಿ
Comments

ಕಲಬುರಗಿ: ಪ್ರವಾದಿ ಮುಹಮ್ಮದ್ ಮತ್ತು ಇಸ್ಲಾಂ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಉತ್ತರ ಪ್ರದೇಶದ ದಾಸ್ನಾ ದೇವಾಲಯದ ಪೀಠಾಧಿಪತಿ ಯತಿ ನರಸಿಂಹಾನಂದ ಮಹಾರಾಜ್ ವಿರುದ್ಧ ನಗರದ ಮೂರು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ರೋಜಾ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾಂತರ ಅಧ್ಯಕ್ಷ ನಯೀಮ್ ಖಾನ್, ಆರ್‌ಜೆ ನಗರ ಪೊಲೀಸ್ ಠಾಣೆಯಲ್ಲಿ ಖಿದ್ಮತ್ ಇ ಮಿಲ್ಲತ್ ಸದಸ್ಯ ಇಮ್ರಾನ್ ರಜ್ವಿ ಮಹಮದ್ ಅಬ್ಬಾಸ್ ಹಾಗೂ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಹಾಜಿಬಾಬಾ ಮಹಮದ್ ಹುಸೇನ್ ಅವರು ದೂರು ದಾಖಲಿಸಿದ್ದಾರೆ.

ಉತ್ತರ ಪ್ರರದೇಶದ ಹಿಂದಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರಸಿಂಹಾನಂದ ಮಹಾರಾಜ್ ಅವರು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಬರುವಂತೆ ಮಾತನಾಡಿದ್ದಾರೆ. ಮುಸ್ಲಿಂ ಸಂತರ ಬಗ್ಗೆಯೂ ಅವಹೇಳನಕಾರಿಯಾಗಿ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಆರ್‌ಜಿ ನಗರ ಹಾಗೂ ರೋಜಾ ಪೊಲೀಸ್ ಠಾಣೆಗಳಲ್ಲಿ ಬಿಎನ್‌ಎಸ್ ಸೆಕ್ಷನ್ ಅಡಿ 196, 297, 302 353(2) ಹಾಗೂ ಸಬ್‌ಅರ್ಬನ್ ಠಾಣೆಯಲ್ಲಿ ಕಲಂ 196, 197, 299, 302 ಅಡಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT