ಕಲಬುರ್ಗಿ: ಜನಗಳ ಹಿತಾಸಕ್ತಿಯನ್ನು ಬದಿಗಿಟ್ಟು ತಮ್ಮ ಸ್ವಾರ್ಥಕ್ಕಾಗಿ ಬಣಗಳನ್ನು ಸೃಷ್ಟಿ ಮಾಡಿಕೊಂಡು ರಾಜೀನಾಮೆ ಕೊಡುವ ಶಾಸಕರನ್ನು ಮುಲಾಜಿಲ್ಲದೇ ಚುನಾವಣೆಯಲ್ಲಿ ಸೋಲಿಸಿ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಜನರಿಗೆ ಕರೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘವು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ದೊಡ್ಡ ಕಾರ್ಖಾನೆಗಳಿಗೆ ರೈತರ ಫಲವತ್ತಾದ ಜಮೀನನ್ನು ಸರ್ಕಾರ ಕಿತ್ತು ಕೊಡುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಭೂ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನಿಮ್ಮ ಮತವನ್ನು ಹಣ, ಹೆಂಡ, ಕಿವಿಯೋಲೆ ಕೊಡುವವರಿಗೆ ಮಾರಿಕೊಳ್ಳಬೇಡಿ. ಹಾಗೆ ಮಾರಿಕೊಂಡರೆ ನಿಮಗೆ ಪ್ರಶ್ನಿಸುವ ಹಕ್ಕೂ ಇಲ್ಲವಾಗುತ್ತದೆ. ನಿಮ್ಮ ಪರವಾಗಿ ವಿಧಾನಸಭೆಯಲ್ಲಿ ಕೆಲಸ ಮಾಡುವವರನ್ನು ಆರಿಸಿ ಕಳುಹಿಸಿರಿ. ಇಂದಿನ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ಜನಗಳ ಹಿತಾಸಕ್ತಿಯನ್ನೇ ಮರೆಯುತ್ತಾರೆ. ಇಂಥವರನ್ನು ಶಾಶ್ವತವಾಗಿ ಮನೆಯಲ್ಲೇ ಕೂರಿಸಿ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.