ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುಭಾಷಾ ಕವಿಗೋಷ್ಠಿಗೆ ಕವನ ಆಹ್ವಾನ

Published : 19 ಸೆಪ್ಟೆಂಬರ್ 2024, 7:15 IST
Last Updated : 19 ಸೆಪ್ಟೆಂಬರ್ 2024, 7:15 IST
ಫಾಲೋ ಮಾಡಿ
Comments

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ‘ಬಹುಭಾಷಾ ಕವಿಗೋಷ್ಠಿ’ಯು ಅಕ್ಟೋಬರ್ 9ರಂದು ಇಲ್ಲಿನ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿದ್ದು, ಕವನ ವಾಚನ ಮಾಡಲು ಆಸಕ್ತರಿಂದ ಕವನ ಆಹ್ವಾನಿಸಲಾಗಿದೆ.

ಯಾವುದೇ ಒಂದು ಭಾಷೆಯ ಒಂದು ಕವನವನ್ನು ಸೆ. 23ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ.

ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲಯಾಳಂ, ತೆಲುಗು, ಮರಾಠಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು ‘ಕನ್ನಡ’ ಲಿಪಿಯಲ್ಲಿ ಹಾಗೂ ಹಿಂದಿ ಇಂಗ್ಲಿಷ್ ಕವನವನ್ನು ಅದೇ ಭಾಷೆಯಲ್ಲಿ ಕಳುಹಿಸಿಕೊಡಬೇಕು. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು, ಮಕ್ಕಳ ಕವನ (6 ರಿಂದ 12 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ ಕಳುಹಿಸಿಕೊಡಬೇಕು.

ಮಾಹಿತಿಗಳಿಲ್ಲದ ಕವನಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕವನ ಮತ್ತು ಮಾಹಿತಿಯನ್ನು ವ್ಯಾಟ್ಸಾಪ್-88676 89193, ಈಮೇಲ್ dasarakavigoshti2024@gmai.com ಮೂಲಕ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ-99720 73295, ಸದಸ್ಯರಾದ ಅಬ್ದುಲ್ ಕೌಸರ್ -70191 24270, ಎಸ್.ಜಿ.ಉಮೇಶ್ - 99806 27920 ಅವರನ್ನು ಸಂಪರ್ಕಿಸಬಹುದು ಎಂದು ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT