ಸೋಮವಾರಪೇಟೆ: ಹರಪಳ್ಳಿ ಅಭಿಮಾನಿಗಳ ಸಂಘದಿಂದ ಶ್ರೀತಲಕಾವೇರಿ ತೀರ್ಥ ತಂದು ಅ.18ರಂದು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ 10 ವರ್ಷಗಳಿಂದ ತೀರ್ಥ ವಿತರಣೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಅ.17ರಂದು ಬೆಳಿಗ್ಗೆ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗಲಿದ್ದು, ಅಲ್ಲಿಂದ ತೀರ್ಥ ತರಲಾಗುವುದು. ಬೆಳಿಗ್ಗೆ 9-30ಕ್ಕೆ ಇಲ್ಲಿನ ಕಾವೇರಿ ಪ್ರತಿಮೆ ಹಾಗೂ ತೀರ್ಥಕ್ಕೆ ಹರಪಳ್ಳಿ ರವೀಂದ್ರ ಪೂಜೆ ಸಲ್ಲಿಸುವರು. ನಂತರ ಜೇಸಿ ವೇದಿಕೆಯಲ್ಲಿ ಬೆಳಿಗ್ಗೆ 11ಕ್ಕೆ ಸಾರ್ವಜನಿಕರಿಗೆ ತೀರ್ಥ ಮತ್ತು ಪ್ರಸಾದ ವಿತರಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ. ರಾಜಪ್ಪ, ಕಾರ್ಯದರ್ಶಿ ಎಚ್.ಬಿ. ಬಸವರಾಜು, ಸಹಕಾರ್ಯದರ್ಶಿ ಗಿರೀಶ್ ಹಾಗೂ ಸದಸ್ಯ ನರಸಿಂಹ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.