ನಾಪೋಕ್ಲು: ಸಮೀಪದ ಚೇರಂಬಾಣೆಯ ಕೊಳಗದಾಳು ಗ್ರಾಮದ ನಿವೃತ್ತ ಯೋಧ ಅಜ್ಜಿನಂಡ ಪೊನ್ನಪ್ಪ ಅವರ 100 ಜನ್ಮದಿನವನ್ನು ಚೇರಂಬಾಣೆ ಕೊಡವ ಸಮಾಜದಲ್ಲಿ ಅವರ ಕುಟುಂಬ ಅದ್ದೂರಿಯಾಗಿ ಆಚರಿಸಿದ ಅವಿಸ್ಮರಣೀಯ ಕ್ಷಣಕ್ಕೆ ಭಾಗವಹಿಸಿದ ಎಲ್ಲರೂ ಸಾಕ್ಷಿಯಾದರು.

ದಿವಂಗತ ಅಜ್ಜಿನಂಡ ಮೇದಪ್ಪ ಹಾಗೂ ಚಿಣ್ಣವ್ವ ದಂಪತಿಯ ಪುತ್ರ ಶತಾಯುಷಿ ಎಂ .ಮೊಣ್ಣಪ್ಪ ಅವರನ್ನು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿ ಕೊಟ್ ಪಾಟ್ ಮೂಲಕ ಸ್ವಾಗತಿಸಲಾಯಿತು. ಕುಟುಂಬ ಬಂಧು ಮಿತ್ರರೊಂದಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲರ ಪರವಾಗಿ ಕೋಟೆರ ಪ್ರಭು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವರ ಸಹೋದರ ಅಪ್ಪಣ್ಣ (97) ಜೊತೆಯಲ್ಲಿ ಉಪಸ್ಥಿತರಿದ್ದು, ಆಗಮಿಸಿದ್ದ ಎಲ್ಲರೂ ಶತಾಯುಷಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಆಶೀರ್ವಾದ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಪ್ರೊ. ಎಂ.ಡಿ ನಂಜುಂಡ, ಬೇಂಗೂರು ನಾಡು ಕಡಪಾಲಪ್ಪ ದೇವಸ್ಥಾನದ ಅಧ್ಯಕ್ಷ ತೇಲಪಂಡ ಕೆ. ಮಂದಣ್ಣ , ನಿವೃತ್ತ ಪೊಲೀಸ್ ಅಧಿಕಾರಿ ಮಣವಟ್ಟಿರ ಸಿ.ಕುಶಾಲಪ್ಪ ಮಾತನಾಡಿದರು. ಚೇರಂಬಾಣೆ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ಪಿ.ಗಣಪತಿ, ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಸಿಎನ್ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಕೊಡಗು ಏಕೀಕರಣರಂಗದ ಪ್ರಮುಖ ತಮ್ಮು ಪೂವಯ್ಯ, ಕೊಡಗು ಏಲಕ್ಕಿ ಸಂಘದ ಅಧ್ಯಕ್ಷ ಸೂದನ ಈರಪ್ಪ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.