ಪಿರಿಯಾಪಟ್ಟಣ: ತಾಲ್ಲೂಕಿನ ಕೊಪ್ಪದಲ್ಲಿ ನಡೆದ ಮದುವೆ ಅರತಕ್ಷತೆ ಸಮಾರಂಭದಲ್ಲಿ ಊಟ ಸೇವಿಸಿದ ನೂರಾರು ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಅವರೆಲ್ಲರೂ ಪಟ್ಟಣ ಸೇರಿದಂತೆ ಕುಶಾಲನಗರ, ಮಡಿಕೇರಿ ಹಾಗೂ ಹಾಸನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಸ್ಲಿಂ ಕುಟುಂಬ ಏರ್ಪಡಿಸಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಂಧುಗಳು ಮಾಂಸಹಾರದ ಊಟ ಸೇವಿಸಿದ ನಂತರ, ಹೊಟ್ಟೆ ನೋವು ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಟಿಎಚ್ಒ ಶ್ರೀನಿವಾಸ್, ‘ಫುಡ್ ಪಾಯಿಸನ್‌ನಿಂದಾಗಿ ಈ ರೀತಿ ತೊಂದರೆ ಕಾಣಿಸಿಕೊಂಡಿದೆ. ಕೆ.ಆರ್.ನಗರದ ಕ್ಯಾಟರಿಂಗ್‌ನಿಂದ ಅಡುಗೆ ಸಿದ್ದಪಡಿಸಿಕೊಂಡು ಬಂದು ಊಟಕ್ಕೆ ಬಡಿಸಲಾಗಿತ್ತು. ಈ ಊಟ ತಿಂದವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ’ ಎಂದು ಪ್ರತಿಕ್ರಿಯಿಸಿದರು.

‘ಕುಶಾಲನಗರದಲ್ಲಿ 140 ಜನರು ಚಿಕಿತ್ಸೆಗೆ ದಾಖಲಾಗಿದ್ದು, ಪಿರಿಯಾಪಟ್ಟಣದಲ್ಲಿ 12 ಜನರು ಚಿಕಿತ್ಸೆ ಪಡೆದುಕೊಂಡಿರುವ ಮಾಹಿತಿ ದೊರೆತಿದೆ. ಹಾಸನದಲ್ಲಿ ಚಿಕಿತ್ಸೆಗೆ ದಾಖಲಾಗಿರುವವರು ವಿವರ ತಿಳಿದು ಬಂದಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.