ಗೋಣಿಕೊಪ್ಪಲು: ಹುದಿಕೇರಿ ಸಮೀಪದ ಬೆಳ್ಳೂರಿನಲ್ಲಿ ಶನಿವಾರ ರಾತ್ರಿ ಬುಡಕಟ್ಟು ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ದೇಹದ ಅಂಗಾಂಗಗಳು ಪತ್ತೆಯಾಗಿವೆ.

ಪಣಿಯರವ ಚೋಂದು (25) ಮೃತಪಟ್ಟ ಮಹಿಳೆ.

ಮಹಿಳೆಯ ಕಾಲು, ದೇಹದ ಮೂಳೆಗಳು ಮತ್ತು ಬಟ್ಟೆ ಮನೆ ಹಿಂದಿನ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯ ಸಹೋದರಿ ನೇತ್ರಾ ಅವರು ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಬ್ ಇನ್ಸ್‌ಪೆಕ್ಟರ್ ತನಿಖೆ ಕೈಗೊಂಡಿದ್ದಾರೆ.

‘ಬೆಳ್ಳೂರಿನ ಗಿರಿಜನ ಹಾಡಿಯ ನಿವಾಸಿ ಪಣಿಯರವ ರಾಜು ಅವರ ಪತ್ನಿ ಚೋಂದು ಶನಿವಾರ ಮಧ್ಯರಾತ್ರಿ ಮನೆಯಿಂದ ಹೊರಗೆ ಹೋಗಿದ್ದರು. ಆಕೆಯ ಪತಿ ಬೆಳಿಗ್ಗೆ ಎದ್ದು ಹುಡುಕಾಡಿದಾಗ ಮನೆಯಿಂದ 500 ಮೀಟರ್ ದೂರದ ಪೊದೆಯೊಂದರಲ್ಲಿ ಮಹಿಳೆಯ ಒಂದು ಕಾಲು ಮತ್ತು ಬಟ್ಟೆ ಕಂಡು ಬಂದಿದೆ.
ಬಹಿರ್ದೆಸೆಗೆಂದು ಹೊರಗೆ ಹೋದಾಗ ಯಾವುದೋ ಪ್ರಾಣಿಗಳು ದಾಳಿ ಮಾಡಿ ತಿಂದು ಹಾಕಿರಬಹುದು ಶಂಕಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಗೊತ್ತಾಗಲಿದೆ’ ಎಂದು ಕುಟ್ಟ ಸಿಪಿಐ ರವಿಶಂಕರ್ ತಿಳಿಸಿದರು.

ಸ್ಥಳಕ್ಕೆ ವಿರಾಜಪೇಟೆ ಡಿವೈಎಸ್ ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.