ಕೋಲಾರ: ಜೂನ್‌ನಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯು ಶೇ 45.94 ಫಲಿತಾಂಶ ಸಾಧನೆ ಮಾಡಿದೆ.

ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂದಿದ್ದ 2,836 ವಿದ್ಯಾರ್ಥಿಗಳ ಪೈಕಿ 1,303 ಮಂದಿ ಉತ್ತೀರ್ಣರಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ 1,753 ಮಂದಿ ಬಾಲಕರು ಪರೀಕ್ಷೆ ಬರೆದಿದ್ದರು. ಈ ಪೈಕಿ 758 ಮಂದಿ ಉತ್ತೀರ್ಣರಾಗಿದ್ದು, ಶೇ 43.24ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಕುಳಿತಿದ್ದ 1,083 ಬಾಲಕಿಯರ ಪೈಕಿ 545 ಮಂದಿ ತೇರ್ಗಡೆಯಾಗಿದ್ದು, ಶೇ 50.32 ಫಲಿತಾಂಶ ಬಂದಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ಒಟ್ಟು 539 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 240 ಮಂದಿ ತೇರ್ಗಡೆಯಾಗಿ ಶೇ 44.53 ಫಲಿತಾಂಶ ಬಂದಿದೆ. ಇಲ್ಲಿ ಪರೀಕ್ಷೆ ಬರೆದಿದ್ದ 332 ಬಾಲಕರಲ್ಲಿ 135 ಮಂದಿ ಉತ್ತೀರ್ಣರಾಗಿ ಶೇ 40.68ರಷ್ಟು ಫಲಿತಾಂಶ ಸಾಧನೆಯಾಗಿದೆ. ಪರೀಕ್ಷೆ ತೆಗೆದುಕೊಂಡಿದ್ದ 207 ಬಾಲಕಿಯರಲ್ಲಿ 108 ಮಂದಿ ತೇರ್ಗಡೆಯಾಗಿ ಶೇ 50.72 ಫಲಿತಾಂಶ ಲಭಿಸಿದೆ.

ಕೆಜಿಎಫ್ ತಾಲ್ಲೂಕಿನಲ್ಲಿ ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 407 ವಿದ್ಯಾರ್ಥಿಗಳಲ್ಲಿ 279 ಮಂದಿ ತೇರ್ಗಡೆಯಾಗಿ ಶೇ 68.55 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ 265 ಬಾಲಕರಲ್ಲಿ 178 ಮಂದಿ ಉತ್ತೀರ್ಣರಾಗಿ ಶೇ 67.17ರಷ್ಟು ಫಲಿತಾಂಶ ಸಾಧನೆಯಾಗಿದೆ. ಅದೇ ರೀತಿ 142 ಬಾಲಕಿಯರು ಪರೀಕ್ಷೆ ಬರೆದಿದ್ದು, 101 ಮಂದಿ ತೇರ್ಗಡೆಯಾಗಿ ಶೇ 71.13 ಫಲಿತಾಂಶ ಬಂದಿದೆ.

ಕೋಲಾರ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತಿದ್ದ 843 ವಿದ್ಯಾರ್ಥಿಗಳ ಪೈಕಿ 311 ಮಂದಿ ಉತ್ತೀರ್ಣತಾಗಿದ್ದು, ಶೇ 36.89 ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದಿದ್ದ 341 ಬಾಲಕಿಯರಲ್ಲಿ 151 ಮಂದಿ ತೇರ್ಗಡೆಯಾಗಿ ಶೇ 44.28 ಫಲಿತಾಂಶ ಬಂದಿದೆ. 502 ಬಾಲಕರು ಪರೀಕ್ಷೆ ಬರೆದಿದ್ದು, 160 ಮಂದಿ ಪಾಸಾಗಿ ಶೇ 31ರಷ್ಟು ಫಲಿತಾಂಶ ಲಭಿಸಿದೆ.

ಮಾಲೂರು ತಾಲ್ಲೂಕಿನಲ್ಲಿ 340 ಮಂದಿ ಪರೀಕ್ಷೆ ಬರೆದಿದ್ದು, 147 ಮಂದಿ ತೇರ್ಗಡೆಯಾಗಿ ಶೇ 43.24ರಷ್ಟು ಫಲಿತಾಂಶ ಸಾಧನೆಯಾಗಿದೆ. 121 ಬಾಲಕಿಯರಲ್ಲಿ 51 ಮಂದಿ ಉತ್ತೀರ್ಣರಾಗಿ ಶೇ 42.15ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ 219 ಬಾಲಕರಲ್ಲಿ 96 ಮಂದಿ ತೇರ್ಗಡೆಯಾಗಿ ಶೇ 43.84 ಫಲಿತಾಂಶ ಲಭಿಸಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಪರೀಕ್ಷೆ ಬರೆದಿದ್ದ 522 ವಿದ್ಯಾರ್ಥಿಗಳಲ್ಲಿ 237 ಮಂದಿ ತೇರ್ಗಡೆಯಾಗಿ 45.40ರಷ್ಟು ಫಲಿತಾಂಶ ಬಂದಿದೆ. 328 ಬಾಲಕರು ಪರೀಕ್ಷೆ ಬರೆದಿದ್ದು, 143 ಮಂದಿ ತೇರ್ಗಡೆಯಾಗಿ ಶೇ 43.60 ಫಲಿತಾಂಶ ಸಾಧನೆಯಾಗಿದೆ. ಅದೇ ರೀತಿ 194 ಬಾಲಕಿಯರು ಪರೀಕ್ಷೆ ಬರೆದಿದ್ದು, 94 ಮಂದಿ ಉತ್ತೀರ್ಣರಾಗಿ ಶೇ 48.45ರಷ್ಟು ಫಲಿತಾಂಶ ಬಂದಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದಿದ್ದ 160 ವಿದ್ಯಾರ್ಥಿಗಳಲ್ಲಿ 74 ಮಂದಿ ತೇರ್ಗಡೆಯಾಗಿ ಶೇ 46.25ರಷ್ಟು ಫಲಿತಾಂಶ ಸಾಧನೆಯಾಗಿದೆ. 91 ಬಾಲಕರಲ್ಲಿ 36 ಮಂದಿ ತೇರ್ಗಡೆಯಾಗಿ ಶೇ 39.56 ಫಲಿತಾಂಶ ಬಂದಿದೆ. 69 ಬಾಲಕಿಯರಲ್ಲಿ 38 ಮಂದಿ ಉತ್ತೀರ್ಣರಾಗಿ ಶೇ 55.07ರಷ್ಟು ಫಲಿತಾಂಶ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.