ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಗಾಂಧಿನಗರ ಸರ್ಕಾರಿ ಶಾಲೆಯು ಐದು ವರ್ಷಗಳಿಂದ ಮುಚ್ಚಿದ್ದು, ಗೌನಿಪಲ್ಲಿ ಕುಮಾರ್ ಎಂಬುವರು ಕುಟುಂಬ ಸಮೇತ ಈ ಶಾಲೆಯಲ್ಲಿ ವಾಸ ಮಾಡುತ್ತಿರುವುದು ಗೊತ್ತಾಗಿದೆ.

ಈ ಸಂಬಂಧ ಗ್ರಾಮಸ್ಥರು ಹಲವಾರು ಬಾರಿ ಶಾಲೆ ತೆರವು ಮಾಡುವಂತೆ ಹೇಳಿದರೂ ಖಾಲಿ ಮಾಡಿಲ್ಲ.

‘ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆ ಬರೆದು ಕೊಟ್ಟಿದ್ದಾರೆ ಎಂಬುದಾಗಿ ಪತ್ರ ತೋರಿಸಿ ಗ್ರಾಮಸ್ಥರನ್ನು ಕುಮಾರ್ ಎಂಬಾತ ಬೆದರಿಸುತ್ತಾನೆ’ ಎಂದು ಗ್ರಾಮಸ್ಥರಾದ ವೆಂಕಟೇಶಮ್ಮ, ನಾಗಮ್ಮ, ಸರಸ್ವತಮ್ಮ , ಶ್ರೀನಿವಾಸ್, ತಿಪ್ಪಣ್ಣ, ನಾರಾಯಣಸ್ವಾಮಿ, ವೆಂಕಟರಮಣ ದೂರಿದ್ದಾರೆ.

‘ಶಾಸಕರ ಗಮನಕ್ಕೆ ತಂದಿದ್ದು, ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ. ಆದರೆ, ಶಿಕ್ಷಣಾಧಿಕಾರಿಯು ಸ್ಥಳಕ್ಕೆ ಭೇಟಿ ನೀಡಿ ನೋಟಿಸ್ ಕೂಡ ನೀಡಿಲ್ಲ. ಹೀಗಾಗಿ, ಆತ ಇನ್ನೂ ಶಾಲೆಯಿಂದ ಹೋಗಿಲ್ಲ. ಗ್ರಾಮದಿಂದ ಸುಮಾರು 10ಕ್ಕೂ ಅಧಿಕ ಮಕ್ಕಳು ಗೌನಿಪಲ್ಲಿ ಹಾಗೂ ಅವಗಾನಪಲ್ಲಿ ಶಾಲೆಗೆ ಪ್ರತಿದಿನ ಹೋಗುತ್ತಿದ್ದಾರೆ. ಗ್ರಾಮದಲ್ಲಿ ಶಾಲೆ ಇದ್ದರೂ ಬೇರೆ ಶಾಲೆಗೆ ಕಳುಹಿಸುವಂತಾಗಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ವಿಚಾರ ಗೊತ್ತಾಗಿ ಘಟನಾ ಸ್ಥಳಕ್ಕೆ ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ಕಾರಿ ಶಾಲೆಯಲ್ಲಿ ಕುಟುಂಬ ಸಮೇತ ವಾಸ ಮಾಡುತ್ತಿರುವ ಕುಮಾರ್ ಎಂಬಾತನ ಕುಟುಂಬವನ್ನು ತಕ್ಷಣ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಮ್ಮ ಊರಿನಲ್ಲಿ ಶಾಲೆಯಿದ್ದರೂ 20 ವಿದ್ಯಾರ್ಥಿಗಳನ್ನು ಬೇರೆ ಗ್ರಾಮಗಳಿಗೆ ಕಳುಹಿಸುವ ಪರಿಸ್ಥಿತಿ ಇದೆ. ಶಾಲೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಗ್ರಾಮಸ್ಥೆ ವೆಂಕಟೇಶಮ್ಮ ಒತ್ತಾಯಿಸಿದರು.

ಜಾಗ ಖಾಲಿ ಮಾಡಲು ಸೂಚಿಸಲಾಗಿದೆ ಈ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಪೊಲೀಸರ ಸಹಕಾರದೊಂದಿಗೆ ಗಾಂಧಿನಗರ ಗ್ರಾಮದ ಶಾಲೆಗೆ ಭೇಟಿ ನೀಡಿದ್ದು ಸರ್ಕಾರಿ ಶಾಲೆಯನ್ನು ವಾಸಕ್ಕೆ ಬಳಸಿಕೊಂಡುತ್ತಿರುವ ಕುಮಾರ್ ಎಂಬುವವರಿಗೆ ಶನಿವಾರ ಜಾಗವನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಸೋಮವಾರ ಶಾಲೆಯನ್ನು ಪ್ರಾರಂಭಿಸುತ್ತಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುವಂತೆ ಮಕ್ಕಳ ಪೋಷಕರಿಗೆ ಮನವಿ ಮಾಡಿದ್ದೇನೆ

- ಬಿ.ಸಿ.ಮುನಿಲಕ್ಷ್ಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.