ಕೆಜಿಎಫ್: ಗೋಮಾಳ ಜಮೀನಿನ ಒಡೆತನಕ್ಕಾಗಿ ಗ್ರಾಮಸ್ಥರು ಹೊಡೆದಾಡಿದ ಘಟನೆ ಗುರುವಾರ ಪಾರಾಂಡಹಳ್ಳಿಯ ಬಳಿಯ ಗುಟ್ಟಹಳ್ಳಿಯಲ್ಲಿ ನಡೆದಿದೆ.

ಬೇತಮಂಗಲ ಹೋಬಳಿ ಪಾರಂಡಹಳ್ಳಿ ಕಂದಾಯ ವೃತ್ತಕ್ಕೆ ಸೇರುವ ಸರ್ವೇ ನಂ. 6ರಲ್ಲಿ ಇರುವ ಗೋಮಾಳದ ಒಡೆತನಕ್ಕಾಗಿ ಎರಡು ಗುಂಪುಗಳು ಪೈಪೋಟಿ ನಡೆಸಿದ್ದವು. ಎರಡು ದಿನಗಳಿಂದ ಗೋಮಾಳ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟು ಮಾಡುವ ಮೂಲಕ ಒಡೆತನಕ್ಕೆ ಹಕ್ಕು ಸಾಧಿಸಲು ಪ್ರಯತ್ನಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸ್ಥಳಕ್ಕೆ ಧಾವಿಸಿದ ರಾಬರ್ಟಸನ್‌ಪೇಟೆ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತಂದರು.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೆ.ಎನ್. ಸುಜಾತಾ, ಈ ಜಮೀನು ಸರ್ಕಾರಿ ಗೋಮಾಳವಾಗಿದೆ. ಅದನ್ನು ಯಾರಿಗೂ ಮಂಜೂರು ಮಾಡಿಲ್ಲ. ಒತ್ತುವರಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.