ಕೆಜಿಎಫ್: ಚೋಳ ಮತ್ತು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ತಾಲ್ಲೂಕಿನ ಕ್ಯಾಸಂಬಳ್ಳಿ ಮಡಿವಾಳದ ಸ್ವಯಂ ಭುವನೇಶ್ವರ ದೇವಾಲಯ ತನ್ನ ವಿಶಿಷ್ಟವಾದ ಕೆತ್ತನೆಗಳಿಂದ ಭಕ್ತರನ್ನು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿದೆ.

ಕನ್ನಡ ಮತ್ತು ತಮಿಳು ಶಾಸನಗಳು ದೇವಾಲಯದ ಸುತ್ತ ಕೆತ್ತಲ್ಪಟ್ಟಿದೆ. ಅವುಗಳು ಇನ್ನೂ ಸ್ಪಷ್ಟವಾಗಿ ಕಾಣುತ್ತಿದೆ. ದೇವಾಲಯದ ಸುತ್ತಮುತ್ತಲಿನ ಕೆಲ ಕಟ್ಟಡಗಳು ನೆಲಕ್ಕೆ ಬಿದ್ದಿದೆ. ಆದರೂ 12ನೇ ಶತಮಾನ ಹಾಗೂ ನಂತರದ ದಿನಗಳಲ್ಲಿ ಕೆತ್ತಲ್ಟಟ್ಟ 20ಕ್ಕೂ ಹೆಚ್ಚು ಶಾಸನಗಳು ಇಲ್ಲಿ ಕಾಣಸಿಗುತ್ತದೆ. ಅವುಗಳೆಲ್ಲವೂ ಬಹುತೇಕ ರಾಜರ ಮತ್ತು ಇತರ ಅರಸರ ಬಗ್ಗೆ ಕೆತ್ತಲ್ಪಟ್ಟವಾಗಿದೆ. ಚೋಳರು ಮತ್ತು ಹೊಯ್ಸಳರ ಕಾಲದಲ್ಲಿ ಕಟ್ಟಲ್ಪಟ್ಟ ದೇವಾಲಯಕ್ಕೆ ವಿಜಯನಗರ ಅರಸರು ಕೂಡ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ.

ರಸ್ತೆ ಮಟ್ಟದಿಂದ ಸುಮಾರು ಹದಿನೈದರಿಂದ ಇಪ್ಪತ್ತು ಅಡಿ ಎತ್ತರದ ಪೀಠದ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ. ಹೊಯ್ಸಳರ ಕಾಲದ ದೇವಾಲಯಗಳಲ್ಲಿ ಕಾಣಸಿಗುವ ನೃತ್ಯ ಮಂಟಪ ಕೂಡ ರಚಿಸಲಾಗಿದೆ. ದೇವಾಲಯದ ಅಭಿವೃದ್ಧಿಗೆ ಮತ್ತು ಉಸ್ತುವಾರಿ ನೋಡಿಕೊಂಡಿದ್ದವರಿಗೆ ದಾನ ನೀಡಿದ ಶಾಸನಗಳನ್ನು ಇಲ್ಲಿ ರಚಿಸಲಾಗಿದೆ. ದೇವಾಲಯಕ್ಕೆ ಸಣ್ಣದಾದ ಒಂದು ಕಲ್ಯಾಣಿ ಕೂಡ ಇದೆ. ಆದರೆ ಅದನ್ನು ಸುಸ್ಥಿತಿಯಲ್ಲಿಡದ ಕಾರಣ ಗಲೀಜಿನಿಂದ ತುಂಬಿದೆ.

ದ್ವಾರ ಮಂಟಪಗಳು ದೇವಾಲಯದ ಒಳಗೆ ಪ್ರವೇಶ ನೀಡುತ್ತವೆ. ನಂದಿ ಮಂಟಪ ಅದರ ಸಮೀಪದಲ್ಲಿಯೇ ಇದೆ. ದೇವಾಲಯದಲ್ಲಿ ಸ್ವಯಂ ಭುವನೇಶ್ವರ ದೇವಾಲಯದ ಜೊತೆಗೆ ಕಾರ್ತಿಕೇಯನ್ ದೇವಾಲಯ ಕೂಡ ಇದೆ. ಯಳವಂಜಿರಾಯ ಎಂಬ ಸಾಮಂತ ದೊರೆ ಈ ದೇವಾಲಯಕ್ಕೆ ಸಾಕಷ್ಟು ದೇಣಿಗೆಯನ್ನು ನೀಡಿದ್ದಾನೆ. ಹೊಯ್ಸಳ ರಾಜರ ಅಡಿಯಲ್ಲಿದ್ದ ಈ ದೊರೆ ಹೊಯ್ಸಳರ ಕಾಲದಲ್ಲಿ ಪ್ರಚಲಿತವಿದ್ದ ಚಿತ್ರಕಲೆಗಳನ್ನು ಇಲ್ಲಿ ರಚಿಸಲು ಶ್ರಮ ಪಟ್ಟಿದ್ದನು ಎಂದು ಹೇಳಲಾಗುತ್ತಿದೆ. ನಂತರದ ದಿನಗಳಲ್ಲಿ ಕೂಡ ಪ್ರಭಾವಿ ಸಾಮಂತರು ಮತ್ತು ಶ್ರೀಮಂತರು ತಮ್ಮ ಕೈಲಾದ ಸಹಕಾರ ನೀಡಿದ್ದರು.

ದೇವಾಲಯ ಶಿಥಿಲವಾಗುವ ಸ್ಥಿತಿ ಬಂದಾಗ, ಧರ್ಮಸ್ಥಳ ದೇವಾಲಯ ಆರ್ಥಿಕ ನೆರವು ನೀಡಿ ದೇವಾಲಯವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡಿದೆ. ಮಡಿವಾಳ ಗ್ರಾಮದ ಸುತ್ತಮುತ್ತಲಿನ ಜನತೆಗೆ ಈ ದೇವಾಲಯ ಪ್ರಾತಃಸ್ಮರಣೀಯವಾಗಿದೆ.

ವೈಶಾಖ ಶುದ್ಧ ಪಂಚಮಿಯಂದು ಬ್ರಹ್ಮ ರಥೋತ್ಸವ, ಆಗಸ್ಟ್ ಹದಿನೈದರಂದು ನಡೆಯುವ ಕಾವಡಿ ಜನಪ್ರಿಯ ಜಾತ್ರೆಯಾಗಿದೆ. ಕಾವಡಿ ಹೊತ್ತು ಮತ್ತು ದೇಹ ದಂಡನೆ ಮಾಡುವ ಕ್ರಿಯೆಗಳು ನಡೆಯುತ್ತವೆ. ಡಿಸೆಂಬರ್ ತಿಂಗಳಲ್ಲಿ ನಡೆಯುವ ಲಕ್ಷ ದೀಪೋತ್ಸವ ಮತ್ತು ಶಿವರಾತ್ರಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ ಎಂದು ಪ್ರಧಾನ ಅರ್ಚಕ ಮನೋಹರ ದೀಕ್ಷಿತ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.