ಮುಳಬಾಗಿಲು: ತಾಲ್ಲೂಕಿನ ಕುರುಡುಮಲೆ ಗ್ರಾಮದ ಲಿಂಗಬಂಡೆಯಲ್ಲಿನಸುಮಾರುಐದು ಅಡಿ ಎತ್ತರದ ಶಿವಲಿಂಗವನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಬಂಡೆಯ ಮೇಲೆನೂರಾರು ವರ್ಷಗಳ ಹಿಂದೆಈ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.ಕಳವಾಗಿರುವವಿಚಾರ ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಆತಂಕಗೊಂಡು ಮುಳಬಾಗಿಲು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

‘ನಿಧಿಗಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ತುಂಬಾ ಭಾರವಿರುವ ಈ ವಿಗ್ರಹವನ್ನು10ರಿಂದ 15 ಮಂದಿ ಕೊಂಡೊಯ್ದಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

‘ದೂರು ದಾಖಲಾಗಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಗ್ರಾಮದಸುತ್ತಹಲವಾರು ಶಿವಲಿಂಗಗಳಿದ್ದು, ಸೋಮೇಶ್ವರ ದೇವಾಲಯದಬಳಿಯ ನಟೇಶ್ವರಸ್ವಾಮಿ ದೇವಾಲಯದಲ್ಲಿ ಈ ಹಿಂದೆ ನಿಧಿಗಳ್ಳರು ವಿಗ್ರಹವನ್ನು ಸ್ಥಾನಪಲ್ಲಟ ಮಾಡಿದ್ದರು. ಲಕ್ಷ್ಮಿದೇವರ ವಿಗ್ರಹ ನಾಪತ್ತೆಯಾಗಿತ್ತು ಎಂಬುದು ಗ್ರಾಮಸ್ಥರು ಹೇಳಿದರು.

‘ಕುರುಡುಮಲೆ ಗ್ರಾಮ ಶಿಲಾಮಯ ಗ್ರಾಮವಾಗಿದ್ದು, ಸುತ್ತಮುತ್ತ ಪುರಾತನ ವಿಗ್ರಹ, ಶಾಸನಗಳು ಇವೆ.ಇವುಗಳನ್ನು ರಕ್ಷಿಸಲು ಪುರಾತತ್ವ ಇಲಾಖೆ ಮುಂದಾಗಬೇಕು’ ಎಂದುಸಂಶೋಧಕಕೆ.ಆರ್. ನರಸಿಂಹನ್ ಹೇಳಿದರು.

ಪುರಾತನ ವಿಗ್ರಹಗಳನ್ನು ಸಂರಕ್ಷಿಸಿ ಭದ್ರತೆಯನ್ನು ಕಲ್ಪಿಸಬೇಕೆಂದು ಗ್ರಾಮದ ವಕೀಲ ಮಂಜುನಾಥ್ ಹಾಗೂ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

‘ಈ ಹಿಂದೆ ನಟೇಶ್ವರಸ್ವಾಮಿ ದೇವಾಲಯದಲ್ಲೂ ನಿಧಿಗಳ್ಳರು ಶಿವಲಿಂಗದ ಪೀಠವನ್ನು ಹಾಳುಗೆಡವಿದ್ದರು’ ಎಂದು ಕದರೀಪುರಗ್ರಾಮಸ್ಥ ಮಣಿಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.