ಶ್ರೀನಿವಾಸಪುರ: ಪಟ್ಟಣದ ಪುರಸಭೆಯಿಂದ ಗುರುವಾರ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿ ಖಾನೆ ಹಾಗೂ ಬಸ್ ನಿಲ್ದಾಣದ ಶುಲ್ಕ ಹರಾಜು ನಡೆಯಿತು.

ಹರಾಜಿನಲ್ಲಿ ದಿನವಹಿ ಮಾರುಕಟ್ಟೆ ವಾರ್ಷಿಕ ₹ 10.20 ಲಕ್ಷ, ವಾರದ ಸಂತೆ ₹ 3.68 ಲಕ್ಷ, ಕಸಾಯಿ ಖಾನೆ ₹ 8,500, ಬಸ್ ನಿಲ್ದಾಣ ಶುಲ್ಕ ₹ 2.56 ಲಕ್ಷ, ತಾಲ್ಲೂಕು ಕಚೇರಿ ಮುಂಭಾಗದ ಶೌಚಾಲಯ ಶುಲ್ಕ ₹ 18,000, ಪುರಸಭೆ ವಾಣಿಜ್ಯ ಮಾರುಕಟ್ಟೆಯಲ್ಲಿರುವ ಶೌಚಾಲಯ ಶುಲ್ಕ ₹ 16,000, ಮುಸಾಫಿರ್ ಖಾನಾ ನೆಲಮಹಡಿ ವಾಹನ ನಿಲುಗಡೆ ಶುಲ್ಕ ₹ 70,000ಕ್ಕೆ ಹರಾಜು ಮಾಡಲಾಯಿತು.

ಈ ಹರಾಜಿನಿಂದ ಪುರಸಭೆಗೆ ವಾರ್ಷಿಕ ಒಟ್ಟು ₹ 17.56 ಲಕ್ಷ ವರಮಾನ ಸಿಕ್ಕಿದೆ.

ಪುರಸಭೆ ಅಧ್ಯಕ್ಷೆ ಎಂ.ಎನ್. ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ, ಕಂದಾಯ ನಿರೀಕ್ಷಕ ವಿ. ನಾಗರಾಜ್, ಎನ್. ಶಂಕರ್, ನಾಗೇಶ್, ವೆಂಕಟೇಶ್, ಸುರೇಶ್, ಮುನಿರಾಜು, ಆನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.