ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್. ಶೇಷಾದ್ರಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೆಯಾಗಿದ್ದ ಅರುಣಾ ರವಿಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 23 ಸದಸ್ಯರಿದ್ದು, ಶೇಷಾದ್ರಿ 14 ಮತ ಪಡೆದು ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 9 ಮತ ಪಡೆದು ಸೋಲುಂಡರು.

ಚುನಾವಣಾಧಿಕಾರಿ ಎನ್. ನಾರಾಯಣಸ್ವಾಮಿ, ಪಿಡಿಒ ಗೌಸ್ ಸಾಬ್ ಇದ್ದರು.

ಚುನಾವಣೆ ಬಳಿಕ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ನೂತನ ಅಧ್ಯಕ್ಷ ಶೇಷಾದ್ರಿ ಅವರಿಗೆ ಶುಭ ಹಾರೈಸಿದರು. ಮುಖಂಡರಾದ ಬಕ್ಷುಸಾಬ್, ರವಿಕುಮಾರ್, ಬಿ.ವಿ. ಶಿವಾರೆಡ್ಡಿ, ಕೆ. ರಾಜೇಂದ್ರಪ್ರಸಾದ್, ವಿ. ಶ್ರೀನಿವಾಸ್, ಎಂ. ರಾಮ್ಮೋಹನ್, ಗಂಗಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.