ಮಾಲೂರು: ಸಂಕ್ರಾತಿ ಹಬ್ಬದ ಪ್ರಯುಕ್ತ ಮಹಿಳೆಯರು ಮತ್ತು ಪುರುಷರು ಅಗತ್ಯ ವಸ್ತುಗಳಾದ ಅವರೆ, ಕಬ್ಬು ಮತ್ತು ಎಳ್ಳು–ಬೆಲ್ಲ ಖರೀದಿಯಲ್ಲಿ ತೊಡಗಿದ್ದರು.

ಪೂಜಾ ಸಾಮಗ್ರಿ ಸೇರಿದಂತೆ ಪಾದಾರ್ಥಗಳ ಬೆಲೆ ಗಗನಕ್ಕೇರಿದ್ದರೂ ಗ್ರಾಹಕರು ಹಬ್ಬದ ಮುನ್ನಾ ದಿನವಾದ ಭಾನುವಾರ ಪಟ್ಟಣದ ಮಹಾರಾಜ ವೃತ್ತದ ಬಳಿ ಹಬ್ಬದ ಆಚರಣೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.

ಹೂವು ಬೆಲೆ ದುಬಾರಿಯಾಗಿತ್ತು. ಕನಕಾಂಬರ ಕೆ.ಜಿ ₹1000, ಮಲ್ಲಿಗೆ ಕೆ.ಜಿಗೆ ₹1100, ಸೇವಂತಿಗೆ ಕೆ.ಜಿ ₹160, ಗುಲಾಬಿ ₹200 ರಿಂದ 225, ಚೆಂಡು ಹೂವು ₹40ರಿಂದ 50 ಬೆಲೆ ಇದ್ದರೂ ಕೂಡ ಗ್ರಾಹಕರು ಹೂವು ಖರೀದಿಸುವಲ್ಲಿ ಹಿಂದೆ ಬೀಳಲಿಲ್ಲ.

ಹೊಸಕೋಟೆ ತಾಲ್ಲೂಕಿನ ಕೊರಳೂರು ಮಲ್ಲಸಂದ್ರದ ಕಬ್ಬು ಪಟ್ಟಣದ ಮಾರುಕಟ್ಟೆಯಲ್ಲಿ ತುಂಬಿದ್ದು, ಜೋಡಿ ಕಬ್ಬಿನ ಜಲ್ಲೆ ₹80ರಿಂದ 100, ಗೆಣಸು ಕೆ.ಜಿ ₹100, ಕಡಲೆಕಾಯಿ ಕೆ.ಜಿ ₹120ರಷ್ಟು ಬೆಲೆ ಇದ್ದರೂ ಗ್ರಾಹಕರು ಖರೀದಿ ಭರಾಟೆಯಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.