ಮುಳಬಾಗಿಲು: ರಾಜ್ಯದ ಅತಿದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾಗಿರುವ ತಾಲ್ಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಗೆ ಸ್ಥಳಾವಕಾಶದ ಕೊರತೆಯಿಂದಾಗಿ ಟೊಮೆಟೊ ವ್ಯಾಪಾರಿಗಳು ಖಾಸಗಿ ಜಮೀನುಗಳಿಗೆ ಬಾಡಿಗೆ ನೀಡಿ ಮಂಡಿಗಳನ್ನು ಇಟ್ಟುಕೊಳ್ಳುವಂತಾಗಿದೆ.

ಎನ್.ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಸುಮಾರು 38ಕ್ಕೂ ಹೆಚ್ಚು ಮಂಡಿಗಳಿದ್ದು, ಪ್ರತಿನಿತ್ಯ ಸುಮಾರು 100ಕ್ಕೂ ಹೆಚ್ಚು ಟೆಂಪೊ ಹಾಗೂ ಲಾರಿಗಳಲ್ಲಿ ನಾನಾ ರಾಜ್ಯಗಳಿಗೆ ಟೊಮೆಟೊ ರಫ್ತಾಗುತ್ತದೆ.

4.3 ಎಕರೆ ಜಮೀನಿನಲ್ಲಿರುವ ಈ ಮಾರುಕಟ್ಟೆಯಲ್ಲಿ 38 ಮಂಡಿಗಳಿವೆ. ಆದರೆ, ವಿಸ್ತೀರ್ಣ ಸಾಲದೆ ಇರುವ ಕಾರಣ ಈ ಮಾರುಕಟ್ಟೆ ವಿಸ್ತರಿಸಲು ಮತ್ತಷ್ಟು ಜಮೀನು ಬೇಕಾಗಿದೆ. ಮಾರುಕಟ್ಟೆಯಲ್ಲಿ ಜಾಗದ ಕೊರತೆಯ ಕಾರಣಕ್ಕಾಗಿ ಕೆಲವು ವ್ಯಾಪಾರಿಗಳಿಗೆ ಎಪಿಎಂಸಿ ಅಧಿಕಾರಿಗಳೇ ಸುತ್ತಮುತ್ತಲಿನ ಖಾಸಗಿ ಜಮೀನುಗಳಲ್ಲಿ ಮಂಡಿ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಜಮೀನಿನ ಮಾಲೀಕರಿಗೆ ಎಪಿಎಂಸಿ ವತಿಯಿಂದಲೇ ಬಾಡಿಗೆ ಸಂದಾಯ ಮಾಡಲಾಗುತ್ತಿದೆ.

ಎನ್.ವಡ್ಡಹಳ್ಳಿ ಮಾರುಕಟ್ಟೆಯನ್ನು ವಿಸ್ತರಿಸಬೇಕು. ಇದಕ್ಕಾಗಿ ಮತ್ತಷ್ಟು ಭೂಮಿಯ ಅತ್ಯವಶ್ಯಕವಿದೆ ಎಂದು ವ್ಯಾಪಾರಿಗಳು ಮತ್ತು ಸುತ್ತಮುತ್ತಲಿನ ಜನರು ಹಲವು ವರ್ಷಗಳಿಂದ ಹೇಳಿಕೊಂಡೇ ಬರುತ್ತಿದ್ದಾರೆ.

ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಅಲ್ಲದೆ, ಟೊಮೆಟೊಗೆ ಬೇಡಿಕೆ ಹೆಚ್ಚಾಗುವ ಋತುಮಾನಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಇದರಿಂದಾಗಿ ಎಪಿಎಂಸಿಗೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಆದರೆ, ಮಾರುಕಟ್ಟೆಯನ್ನು ವಿಸ್ತರಿಸಲು ಭೂಮಿಯ ಖರೀದಿಗಾಗಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.

ಗಗನಕ್ಕೇರಿದ ಜಮೀನು ದರ: ರಾಷ್ಟ್ರೀಯ ಹೆದ್ದಾರಿ 75ರ ಪರಿಣಾಮದಿಂದಾಗಿ ಸುತ್ತಮುತ್ತಲಿನ ಜಮೀನು ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಈ ಭಾಗದ ಜಮೀನು ಮಾಲೀಕರು, ತಮ್ಮ ಖಾಲಿ ಜಮೀನನ್ನು ಬಾಡಿಗೆಗೆ ಕೊಡಲು ಮೀನಾಮೇಷ ಎಣಿಸುತ್ತಾರೆ. ಜೊತೆಗೆ ದುಬಾರಿ ಬೆಲೆಯ ಬಾಡಿಗೆಗೆ ಬೇಡಿಕೆ ಇಡುತ್ತಾರೆ. ಹೀಗಾಗಿ, ಇರುವ ಜಾಗದಲ್ಲೇ ಒದ್ದಾಡುವ ಪರಿಸ್ಥಿತಿ ಇದೆ ಎಂದು ಕೆಲವು ಮಂಡಿ ಮಾಲೀಕರು ಹೇಳುತ್ತಾರೆ.

ಹೊಸ ಮಂಡಿಗಳಿಗಿಲ್ಲ ಜಾಗ: ಈಗಾಗಲೇ ಮಾರುಕಟ್ಟೆಯಲ್ಲಿ 38 ಮಂಡಿಗಳಿವೆ. ಈ ಮಾರುಕಟ್ಟೆಯಲ್ಲಿ ಮತ್ತಷ್ಟು ಮಂಡಿ ತೆಗೆಯಲು ಕೆಲವರು ಬಯಸುತ್ತಾರೆ. ಆದರೆ, ಜಾಗದ ಕೊರತೆಯ ಕಾರಣಕ್ಕೆ ಹೊಸ ಮಂಡಿ ಆರಂಭಿಸುವವರಿಗೆ ನಿರಾಶೆಯಾಗಿದೆ.

ನೆರೆ ರಾಜ್ಯಗಳಿಂದಲೂ ಬರುವ ವ್ಯಾಪಾರಿಗಳು

ಎನ್.ವಡ್ಡಹಳ್ಳಿ ಟೊಮೆಟೊ ಮಾರುಕಟ್ಟೆಗೆ ನೆರೆಯ ತಮಿಳುನಾಡು ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳ ವ್ಯಾಪಾರಿಗಳು ಟೊಮೆಟೊ ಖರೀದಿಗೆ ಬರುತ್ತಾರೆ. ತಮಿಳುನಾಡಿನ ಚೆನ್ನೈ ಮಾರುಕಟ್ಟೆ ಸಮೀಪ ಇರುವ ಕಾರಣದಿಂದಾಗಿ ತಾಲ್ಲೂಕಿನ ರೈತರು ಟೊಮೆಟೊವನ್ನು ಮುಖ್ಯ ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದಾರೆ. ಹೀಗಾಗಿ ಎನ್ ವಡ್ಡಹಳ್ಳಿ ಟೊಮೆಟೊ ಮಾರುಕಟ್ಟೆಯು ಪ್ರತಿನಿತ್ಯವು ರೈತರು ವ್ಯಾಪಾರಿಗಳು ಕೂಲಿ ಕಾರ್ಮಿಕರು ಅಧಿಕಾರಿಗಳು ಸೇರಿದಂತೆ ನೂರಾರು ಮಂದಿಯಿಂದ ಗಿಜಗುಡುತ್ತಿರುತ್ತದೆ. ಮಾರುಕಟ್ಟೆಗೆ ವಿಶಾಲವಾದ ಸ್ಥಳ ಇಲ್ಲದ ಕಾರಣ ಕೆಲವು ವ್ಯಾಪಾರಿಗಳು ತಮ್ಮ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 75ರ ಪಾದಚಾರಿ ಮಾರ್ಗಗಳಲ್ಲಿ ನಿಲ್ಲಿಸುತ್ತಾರೆ. ಮತ್ತೆ ಕೆಲವರು ಸುತ್ತಮುತ್ತ ಇರುವ ಖಾಲಿ ಜಮೀನುಗಳಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಸುತ್ತಮುತ್ತಲಿನ ಜನರು ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಹರಾಜು ವೇಳೆ ಕಾಲಿಡಲಾಗದ ಸ್ಥಿತಿ

ಬೆಳಗ್ಗೆ ಟೊಮೆಟೊ ಹರಾಜು ಸಮಯದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರು ರೈತರು ವ್ಯಾಪಾರಿಗಳು ವಾಹನ ಸವಾರರು ಕೂಲಿ ಕಾರ್ಮಿಕರು ಒಂದೇ ಸಲ ಸಮಾಗಮವಾಗುತ್ತಾರೆ. ಇದರಿಂದಾಗಿ ಹರಾಜು ಪ್ರಕ್ರಿಯೆ ವೇಳೆ ಕಾಲಿಡಲಾಗದಷ್ಟು ಜನಜಂಗುಳಿ ಇರುತ್ತದೆ. ಹೀಗಾಗಿ ಮಾರುಕಟ್ಟೆಗೆ ವಿಶಾಲವಾದ ಸ್ಥಳಾವಕಾಶದ ಅಗತ್ಯವಿದೆ ಎನ್ನುವುದು ರೈತರ ಬಹುದಿನಗಳ ಬೇಡಿಕೆಯಾಗಿದೆ.

‘ಅಕ್ಕಪಕ್ಕದ ಜಮೀನು ಖರೀದಿಸಲಿ’

ಎನ್.ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸಾರಿಗೆ ಸಂಪರ್ಕ ಹಾಗೂ ಟೊಮೆಟೊ ಖರೀದಿಗೆ ಹೆಚ್ಚು ವ್ಯಾಪಾರಿಗಳು ಸೇರುತ್ತಾರೆ. ಟೊಮೆಟೊ ಬೆಳೆಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ರೈತರು ಟೊಮೆಟೊ ಬೆಳೆಯುವುದು ಹಾಗೂ ಮಾರುಕಟ್ಟೆಗೆ ಸರಕನ್ನು ಹಾಕುವುದು ಹೆಚ್ಚಾಗುತ್ತಿದೆ. ಹೀಗಾಗಿ ಮಾರುಕಟ್ಟೆಯ ಸುತ್ತಲೂ ಎಪಿಎಂಸಿ ಅಧಿಕಾರಿಗಳು ಭೂಮಿ ಖರೀದಿಸಿ ಮಾರುಕಟ್ಟೆಯನ್ನು ವಿಸ್ತರಿಸಬೇಕು. ಇಲ್ಲದಿದ್ದರೆ ಮಾರುಕಟ್ಟೆ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ.

- ನಗವಾರ ಎನ್.ಆರ್.ಸತ್ಯಣ್ಣ ಮಂಡಿ ಮಾಲೀಕ

ಸ್ಥಳಾವಕಾಶದ ಕೊರತೆ ನಿಜ

ವ್ಯಾಪಾರ ವಹಿವಾಟಿಗೆ ಸ್ಥಳಾವಕಾಶ ಕೊರತೆ ಇರುವುದು ನಿಜ. ಹೀಗಾಗಿ ತಾತ್ಕಾಲಿಕವಾಗಿ ಸುತ್ತಮುತ್ತಲಿನ ಖಾಸಗಿ ಜಮೀನುಗಳನ್ನು ಬಾಡಿಗೆಗೆ ಪಡೆದು ಮಂಡಿ ನಡೆಸಲಾಗುತ್ತಿದೆ. ಮಾರುಕಟ್ಟೆ ಸುತ್ತಲೂ ಇರುವ ಭೂಮಿಯ ಬೆಲೆ ಗಗನಕ್ಕೇರಿದ ಕಾರಣ ಸ್ವಂತಕ್ಕೆ ಜಮೀನು ಖರೀದಿ ಅಸಾಧ್ಯ. ಹೀಗಾಗಿ ಜಮೀನನ್ನು ಬಾಡಿಗೆಗೆ ಪಡೆದು ಹೆಚ್ಚುವರಿ ಮಂಡಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

- ಹರೀಶ್ ಕುಮಾರ್ ಎಪಿಎಂಸಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.