ಕೋಲಾರ: ‘ಸ್ಪರ್ಧಾತ್ಮಕ ಯುಗದಲ್ಲಿ ನಾವು ಮುಂದೆ ಸಾಗುತ್ತಲೇ ಇರಬೇಕು. ಸ್ಪರ್ಧೆಯನ್ನು ಧೈರ್ಯದಿಂದಲೇ ಎದುರಿಸಬೇಕು. ನಿರಂತರ ಶ್ರಮ ಮತ್ತು ಕಲಿಕೆ ನಮ್ಮನ್ನು ಮುನ್ನಡೆಸುತ್ತದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು.

ಮಂಗಸಂದ್ರದಲ್ಲಿರುವ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಕನ್ನಡ ವಿಭಾಗ ಆಯೋಜಿಸಿದ್ದ ಯುಜಿಸಿ ನೆಟ್, ಕೆ-ಸೆಟ್ ಪರೀಕ್ಷೆ ಕುರಿತಂತೆ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೌಲ್ಯಮಾಪನ ಕುಲಸಚಿವ ಡಿ ಡೊಮಿನಿಕ್ ಮಾತನಾಡಿ, ‘ವಿದ್ಯಾರ್ಥಿಗಳು ಯಾವಾಗಲೂ ತರ್ಕಬದ್ಧವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳಬೇಕು. ಮಾಹಿತಿಯನ್ನು ಗುಡ್ಡೆ ಹಾಕಿಕೊಳ್ಳದೆ, ಅದನ್ನು ವಿಶ್ಲೇಷಣೆ ಮಾಡುವ ಮನಸ್ಥಿತಿ ಬೆಳಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಮುಖ್ಯ’ ಎಂದರು.

ಈ ಸಾಲಿನಲ್ಲಿ ನೆಟ್ ಪಾಸಾಗಿರುವ ಕಿರಣ್ ಕುಮಾರ್ ಮತ್ತು ಲಕ್ಷ್ಮಿ ಪ್ರಸನ್ನ ಅವರನ್ನು ನಿರಂಜನ ವಾನಳ್ಳಿ ಸನ್ಮಾನಿಸಿದರು.

ಕೇಂದ್ರದ ನಿರ್ದೇಶಕಿ ಡಿ.ಕುಮುದಾ, ಸಂಪನ್ಮೂಲ ವ್ಯಕ್ತಿಗಳಾದ ರವಿ ಬಿ.ಕೆ, ವರುಣ್ ರಾಜ್ ಜಿ, ಕನ್ನಡ ವಿಭಾಗದ ಉಪನ್ಯಾಸಕರಾದ ಕೆ.ವಿ ನೇತ್ರಾವತಿ, ನಾ.ಮುನಿರಾಜು, ಗಾಯತ್ರಿದೇವಿ, ಶ್ರೀನಿವಾಸ್ ಜಿ ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.