ನಗರದ ಕೆಇಬಿ ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಶೌಚಾಲಯ ನಿರ್ವಹಣೆ ಇಲ್ಲದೆ ಕಸ ಕಡ್ಡಿಗಳಿಂದ ಕೂಡಿರುವುದು.
ನಗರದಲ್ಲಿ ಶೌಚಾಲಯಗಳನ್ನು ಹೆಚ್ಚಾಗಿ ನಿರ್ಮಿಸಿ ದೂರದ ಕಡೆಗಳಿಂದ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಲವು ಬಾರಿ ನಗರಸಭೆ ಆಯುಕ್ತ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇಲ್ಲದಂತಾಗಿದೆ.
ಪ್ರಭಾಕರ್ ಸಾರ್ವಜನಿಕ
ನಗರದಲ್ಲಿ ಮುಚ್ಚಲಾಗಿರುವ ಶೌಚಾಲಯಗಳು ಸ್ವಲ್ಪ ದುರಸ್ತಿಯಾಗಿದ್ದು ಶೀಘ್ರದಲ್ಲೇ ಪುನಃ ಕಾರ್ಯಾರಂಭ ಮಾಡಲು ಟೆಂಡರ್ ಕರೆದು ಶೌಚಾಲಯಗಳನ್ನು ತೆರೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
ಶ್ರೀಧರ್ ನಗರಸಭೆ ಪೌರಾಯುಕ್ತ
ಸಾರ್ವಜನಿಕ ಶೌಚಾಲಯಗಳಿಲ್ಲ
ನಗರದಲ್ಲಿ ತರಕಾರಿ ತಳ್ಳುವ ಗಾಡಿ ಬೀದಿ ಬದಿ ವ್ಯಾಪಾರಿಗಳು ಹೀಗೇ ಅನೇಕ ಅಂಗಡಿಗಳಿದ್ದು ಎಲ್ಲರಿಗೂ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲ. ಹಾಗಾಗಿ ಶಾಲಾ– ಕಾಲೇಜುಗಳ ಕಾಂಪೌಂಡ್ ಮರಗಿಡಗಳ ಆಶ್ರಯದಲ್ಲಿ ಮೂತ್ರ ವಿಸರ್ಜನೆಗೆ ಹೋಗುವ ಸ್ಥಿತಿ ಇದೆ ಎಂದು ಅಂಗಡಿ ವ್ಯಾಪಾರಿ ಬಾಲಮುರುಗನ್ ಹೇಳಿದರು.