ಕೆಜಿಎಫ್ (ಕೋಲಾರ ಜಿಲ್ಲೆ): ಮಾರಿಕುಪ್ಪಂನ ಬಿಜಿಎಂಎಲ್ನಮುಚ್ಚಿದ್ದ ಗಣಿಯೊಳಗೆ ಇಳಿಯಲು ಯತ್ನಿಸಿದ್ದಮೂವರು ಮೃತಪಟ್ಟಿದ್ದಾರೆ. ಈವರೆಗೆ ಎರಡು ಶವಗಳನ್ನು ಹೊರಗೆ ತರಲಾಗಿದೆ. ಮತ್ತೊಂದು ಶವಕ್ಕಾಗಿ ಶೋಧನೆ ಮುಮದುವರಿದಿದೆ.

ಮೃತರು ಮೈಸೂರು ಮೈನ್ಸ್ ಇನ್ಕ್ಲೈನ್ ಶಾಫ್ಟ್ನಲ್ಲಿ ಕಳ್ಳತನಕ್ಕಾಗಿ ಯತ್ನಿಸಿದ್ದರು ಎಂದು ಶಂಕಿಸಲಾಗಿದೆ. ಮೃತರನ್ನು ಆಂಡರಸನ್ಪೇಟೆಯ ಕಂದ, ಜೋಸೆಫ್ ಮತ್ತು ಪಡಿಯಪ್ಪ ಎಂದು ಗುರುತಿಸಲಾಗಿದೆ. ಮೂವರೂಉಸಿರುಗಟ್ಟಿ ಮೃತಪಟ್ಟಿದ್ದಾರೆ. ಪಡಿಯಪ್ಪ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.

ಸುಮಾರು1500 ಅಡಿ ಆಳದಲ್ಲಿ ಶವ ಇರಬಹುದು ಎಂದು ಶಂಕಿಸಲಾಗಿದೆ.ಮೃತ ಕಂದ ಮತ್ತು ಜೋಸೆಫ್ ಅವರ ಶವವನ್ನು ಕೋಲಾರದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಗಣಿಗೆ ಇಳಿದಿದ್ದವರುಮಿಥಾಲಿನ್ ಅಥವಾ ಕಾರ್ಬನ್ ಮಾನಾಕ್ಸೈಡ್ ಅನಿಲ ಉಸಿರಾಡಿ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಅಸ್ವಸ್ಥರಾಗಿರುವಚಾಮರಾಜಪೇಟೆ ನಿವಾಸಿ ವಿಕ್ಟರ್ ಮತ್ತು ಕಾರ್ತಿಕ್ ಅವರನ್ನು ರಾಬರ್ಟಸನ್ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್, ಅಗ್ನಿಶಾಮಕ ದಳ ಮತ್ತು ಗಣಿಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ. ಸಾವಿರಾರು ಅಡಿಆಳದಲ್ಲಿರುವ ಶವವನ್ನು ತೆಗೆಯಲು ಸ್ಕ್ಯಾನರ್ ಬಳಕೆಯನ್ನು ಪರಿಶೀಲಿಸಲಾಗುತ್ತಿದೆ.

ರಾತ್ರಿ 9 ಗಂಟೆಯಲ್ಲಿ ಇವರು ಗಣಿಗೆ ಇಳಿದಿದ್ದರು ಎನ್ನಲಾಗಿದೆ. ನಡುರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆಯೂ ಆರಂಭವಾಗಿದೆ.
ಘಟನೆ ನಡೆದ ಬಿಜಿಎಂಎಲ್ ಶಾಫ್ಟ್ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅಡಿ ಆಳವಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಳಿ ಆಕ್ಸಿಜನ್ ಸಿಲಿಂಡರ್ ಕೊರತೆ ಕಂಡು ಬಂದ ಕಾರಣಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಂಡಿದೆ.

ಗಣಿಯಲ್ಲಿ ಸಿಗುವ ಚಿನ್ನದ ಅದಿರುಮತ್ತು ಕಬ್ಬಿಣಕ್ಕಾಗಿ ಇವರುಕಳ್ಳತನಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ:ಚಿನ್ನದ ಗಣಿ ಮುಚ್ಚಿದ ಬಾಗಿಲ ಮುಂದೆ...

ಕೆಜಿಎಫ್ ಗಣಿಯಲ್ಲಿ ಉಸಿರುಗಟ್ಟಿ ಸತ್ತಿರುವವರ ಶವ ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.