ಕೋಲಾರ: ‘ರಾಹುಲ್ ಗಾಂಧಿ ಅವರಿಗೆ ಶಿಕ್ಷೆಯಾದ ಮೇಲೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಕೂಡ ಅದೇ ರೀತಿ ಮಾತನಾಡಿ ಸವಾಲು ಹಾಕಿದ್ದಾರೆ. ಈ ಬಗ್ಗೆಯೂ ಬಿಜೆಪಿ ಮುಖಂಡರೊಂದಿಗೆ ಮಾತನಾಡಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ’ ಎಂದು ಬಿಜೆಪಿ ಮುಖಂಡ ಪಿ.ಎಂ.ರಘುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನ ಕಾಂಗ್ರೆಸ್ ಭವನದ ಬಳಿ ಗುರುವಾರ ಮಾತನಾಡಿದ್ದ ನಲಪಾಡ್, ‘ಮೋದಿ ಅಂಥ ಹೆಸರು ಇಟ್ಟುಕೊಂಡವರೆಲ್ಲಾ ಕಳ್ಳರೇ, ಏನು ಮಾಡುತ್ತೀರಾ? ಕೇಸ್ ಹಾಕುತ್ತೀರಾ? ಹಾಕಿಕೊಳ್ಳಿ’ ಎಂದು ಸವಾಲು ಹಾಕಿರುವುದು ಗೊತ್ತಾಗಿದೆ.

ಈ ವಿಡಿಯೊವನ್ನು ‘ಬಿಜೆಪಿ ಕರ್ನಾಟಕ’ ತನ್ನ ಫೇಸ್‌ಬುಕ್ ಪುಟದಲ್ಲಿ ಶೇರ್ ಮಾಡಿಕೊಂಡು, ‘ಹಿಂದೂ ಸಮಾಜದ ಹಿಂದುಳಿದ ವರ್ಗದ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪದೇಪದೇ ನಿಂದಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಜಿಹಾದಿ ಮಾನಸಿಕತೆಗೆ ಹಿಡಿದಿರುವ ಕನ್ನಡಿ. ಇದೂ ರಾಹುಲ್ ಗಾಂಧಿ ಅವರಂಥದ್ದೇ ಶಿಕ್ಷೆಯನ್ನು ಅಪೇಕ್ಷಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.