ಮುಳಬಾಗಿಲು: ತಾಲ್ಲೂಕಿನ ದುಗ್ಗಸಂದ್ರ ಹೋಬಳಿ ತಾವರೆಕೆರೆ ಗ್ರಾಮದ ಹೊರವಲಯದಲ್ಲಿ ಸುಂದರವಾದ ಬೆಟ್ಟಗುಡ್ಡಗಳ ನಡುವೆ ಹಲವು ಬಗೆಯ ಹಳೆ ಕಾಲದ ಮಡಿಕೆ ಚೂರುಗಳು, ವಿಭೂತಿಯಂತಹ ಬಿಳಿಯ ಪುಡಿಯಥೇಚ್ಛವಾಗಿ ಕಾಣ ಸಿಗುತ್ತಿರುವುದು ಸ್ಥಳೀಯರನ್ನು ವಿಸ್ಮಯಗೊಳಿಸಿದೆ.

ಐತಿಹಾಸಿಕವಾಗಿ ಹಲವಾರು ಸಂಗತಿಗಳನ್ನು ಹೇಳುವ ಈಬೆಟ್ಟ ಗುಡ್ಡದ ಸಾಲುಗಳುಅನಾದಿಕಾಲದಿಂದ ಜನರ ಬಾಯಲ್ಲಿ ಯಜ್ಞ ಗುಡ್ಡಗಳು ಎಂದು ಹೆಸರು ಪಡೆದಿದೆ.

ತಾವರೆಕೆರೆಗೆ ಹೊಂದಿಕೊಂಡಿರುವ ಹೋಬಳಿ ಕೇಂದ್ರವಾದ ದುಗ್ಗಸಂದ್ರ ಗ್ರಾಮದಲ್ಲಿ ಸುಮಾರು ಒಂದು ಸಾವಿರ ವರ್ಷಕ್ಕೂ ಹಿಂದಿನ ವೀರಗಲ್ಲುಗಳು ಸಿಕ್ಕಿವೆ. ಇದನ್ನು ಮಿಥಿಕ್ ಸೊಸೈಟಿಯಲ್ಲಿ ದಾಖಲಿಸಲಾಗಿದೆ. ಪುರಾತನ ಪ್ರಸಿದ್ಧ ಕುರುಡುಮಲೆ ಗ್ರಾಮಕ್ಕೆ ಹೊಂದಿಕೊಂಡಿರುವ ತಾವರೆಕೆರೆ ಗ್ರಾಮದಲ್ಲಿ ಹಲವು ಹಿಂದಿನ ವಸ್ತುಗಳು ಸಿಗುತ್ತಿರುವುದರಿಂದ ಈ ಗುಡ್ಡದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಆದರೆ, ಇವು ಇಂದಿಗೂ ಇತಿಹಾಸಕಾರರ ಗಮನಕ್ಕೆ ಬಂದಿಲ್ಲ. ಇತಿಹಾಸದ ಮೇಲೆ ಆಸಕ್ತಿ ಇರುವವರು ತಾವರೆಕೆರೆ ಗ್ರಾಮದಯಜ್ಞ ಗುಡ್ಡಗಳ ಬಗ್ಗೆ ಸಂಶೋಧನೆ ನಡೆಸಿದರೆ ಹಲವಾರು ಹೊಸ ವಿಷಯಗಳು ಬೆಳಕಿಗೆ ಬರಬಹುದು ಎನ್ನುತ್ತಾರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪುರಾತನ ದೇವಾಲಯಗಳ ಕುರಿತು ಸಂಶೋಧನೆಗಳನ್ನು ನಡೆಸಿರುವ ಪ್ರೊ.ಕೆ.ಆರ್.ನರಸಿಂಹನ್.

ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ನೆರೆಯ ಆಂಧ್ರಪ್ರದೇಶದ ಮತ್ತು ತಮಿಳುನಾಡು ರಾಜ್ಯಗಳಿಗೆ ಸೇರಿದ ಖಾಸಗಿಕಂಪೆನಿಗಳು ಗ್ರಾನೈಟ್ ದಂಧೆಯೊಂದಿಗೆ ಕೋಳಿ ಫಾರಂಗಳನ್ನು ಪ್ರಾರಂಭಿಸುತ್ತಿದೆ. ಗ್ರಾನೈಟ್ದಂಧೆಯಿಂದಾಗಿ ಈಗಾಗಲೇ ಹಲವಾರು ಗುಡ್ಡಗಳು ತಮ್ಮ ನೈಜ ಸ್ವರೂಪವನ್ನು ಕಳೆದುಕೊಂಡಿದೆ. ಮುಂದಿನ ದಿವಸಗಳಲ್ಲಿ ಪ್ರಕೃತಿ ಸೌಂದರ್ಯ ಹಾಗೂ ರಮ್ಯವಾದ ಪ್ರದೇಶಗಳು ಮಾಲಿನ್ಯ ಭರಿತವಾಗಬಹುದು ಎಂದು ಸ್ಥಳೀಯರಾದ ನಾರಾಯಣರೆಡ್ಡಿ ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.