ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: 14 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಪತ್ತೆ

Published : 7 ಅಕ್ಟೋಬರ್ 2024, 14:11 IST
Last Updated : 7 ಅಕ್ಟೋಬರ್ 2024, 14:11 IST
ಫಾಲೋ ಮಾಡಿ
Comments

ಗಂಗಾವತಿ: ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2009ರಲ್ಲಿ ನಡೆದ ದರೋಡೆ, ಕಳ್ಳತನ, ಸಾವು ಉಂಟು ಮಾಡಿದ ಪ್ರಕರಣದ ಆರೋಪಿ ಆಬೀದಖಾನ್ (32) ಎಂಬಾತನನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ರಾಜ್ಯ ಪ್ರತಾಪಗಡ ಜಿಲ್ಲೆಯ ಬರಿಸ್ತಾ ಗ್ರಾಮದ ಈತ 2009ರಲ್ಲಿ ದರೋಡೆ, ಕಳ್ಳತನ, ಸಾವು ಉಂಟುಮಾಡುವ ಪ್ರಕರಣದಡಿ ಸಿಲುಕಿ, ಕೊಪ್ಪಳ ಜಿಲ್ಲಾ ಕಾರಗೃಹದ ನ್ಯಾಯಾಂಗ ಬಂಧನದಲ್ಲಿದ್ದು, 2010ರಲ್ಲಿ ಕಾರಗೃಹದಿಂದ ಪರಾರಿಯಾಗಿದ್ದನು.

ಆರೋಪಿ ಪತ್ತೆಗಾಗಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಶೇಷ ತಂಡ ರಚನೆ ಮಾಡಲಾಗಿತ್ತು. ಅಧಿಕಾರಿಗಳು ಆರೋಪಿ ಪತ್ತೆಗಾಗಿ ತನಿಖೆ ನಡೆಸಿದಾಗ ಡಕಾಯಿತಿ, ಸಾವು ಮತ್ತು ಹಾನಿ ಉಂಟುಮಾಡುವ ಪ್ರಕರಣದಡಿ ದಸ್ತಗಿರಿಯಾಗಿ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲಾ ಕಾರಗೃಹದಲ್ಲಿ ಬಂಧನದಲ್ಲಿರುವುದು ತಿಳಿದು ಬಂದಿತು.

ಕೂಡಲೇ ಪೊಲೀಸ್ ಅಧಿಕಾರಿಗಳು ಬಾಡಿ ವಾರೆಂಟ್ ಮೂಲಕ ಅಲ್ಲಿನ ಜಿಲ್ಲಾ ಕಾರಗೃಹದಿಂದ ವಶಕ್ಕೆ ಪಡೆದು, ಗಂಗಾವತಿಗೆ ಕರೆತರಲಾಗಿದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹೇಮಂತಕುಮಾರ, ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪೊಲೀಸ್‌ಪಾಟೀಲ, ನಗರಠಾಣೆ ಪಿಐ ಪ್ರಕಾಶ ಮಾಳಿ ಮಾರ್ಗದರ್ಶನದಲ್ಲಿ ಎಎಸ್ಐ ಅಜೀಜಸಾಬ, ಶಿವಶರಣಪ್ಪ, ಸಿಎಚ್. ಸಿ.ಮರಿಶಾಂತಗೌಡ, ಸಿಪಿಸಿ ವಿಶ್ವನಾಥ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT