ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮ ಸಮೀಪದ ನವ ವೃಂದಾವನ ಗಡ್ಡೆಯಲ್ಲಿ ಏಪ್ರಿಲ್ 16ರಿಂದ 18ರವರೆಗೆ ಶ್ರೀಕವೀಂದ್ರ ತೀರ್ಥರ ಆರಾಧನೆ ನಡೆಸಲು ಉತ್ತರಾದಿಮಠ ಮತ್ತು ಮಂತ್ರಾಲಯ ರಾಯರ ಮಠಕ್ಕೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ತಲಾ ಒಂದೂವರೆ ದಿನದಂತೆ ಅವಕಾಶ ನೀಡಿ, ಮಧ್ಯಂತರ ಆದೇಶ ಹೊರಡಿಸಿದೆ.

ಇದರನ್ವಯ ಉತ್ತರಾದಿಮಠದಿಂದ ಮಂಗಳವಾರ (ಏ.16) ಬೆಳಿಗ್ಗೆ ಶ್ರೀಕವೀಂದ್ರ ತೀರ್ಥರ ಆರಾಧನೆ ಭಾಗವಾಗಿ ಕವೀಂದ್ರತೀರ್ಥರ ಬೃಂದಾವನಕ್ಕೆ ವಿಶೇಷ ಪೂಜೆ, ಮನ್ಯಾಯಸುಧಾಪಾಠ, ಪೂಜೆ, ಜ್ಞಾನಸತ್ರ ಸೇರಿ ಸಂಜೆ ದೀಪೋತ್ಸವ, ಉಪನ್ಯಾಸ, ಸಾರ್ವಜನಿಕ ದರ್ಶನ ಕಾರ್ಯಕ್ರಮಗಳು ನಡೆಯಲಿವೆ.

ಇನ್ನೂ 17ರಂದು ಬೆಳಿಗ್ಗೆ ಬೃಂದಾವನಕ್ಕೆ ವಿಶೇಷ ಪೂಜೆ ನಡೆಸುವ ಜತೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಉತ್ತರಾಧಿಮಠದ ಶಿಷ್ಯಂದಿರು ಮನವಿ ಮಾಡಿದ್ದಾರೆ.

ಮಂತ್ರಾಲಯ ಮಠ: ಏ.17ರಂದು ಮಧ್ಯಾಹ್ನ 1ರಿಂದ ಏ.18ರವರೆಗೆ ನವವೃಂದಾವನ ಗಡ್ಡೆಯಲ್ಲಿ ಹೈಕೋರ್ಟ್ ಆದೇಶ ಮತ್ತು ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಸೂಚನೆಯಂತೆ ರಾಯರಮಠದಿಂದ ಕವೀಂದ್ರ ತೀರ್ಥರ ಆರಾಧನ ಮಹೋತ್ಸವ ನಡೆಯಲಿದೆ.

ರಾಯರ ಮಠಕ್ಕೆ ನೀಡಿದ ಒಂದೂವರೆ ದಿನದಲ್ಲಿ ಕವೀಂದ್ರ ತೀರ್ಥರ ಮೂಲಬೃಂದಾವನಕ್ಕೆ ಪಂಚಾಮೃತ ಅಭಿಷೇಕ ವಿಶೇಷ ಪುಷ್ಪಾಲಂಕಾರ, ಸಂಸ್ಥಾನ ಪೂಜೆ, ವಿದ್ವಾಂಸರ ಪ್ರವಚನ, ಅಲಂಕಾರ, ತೀರ್ಥಪ್ರಸಾದ ಸೇರಿ ಹಲವು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.