ಕನಕಗಿರಿ: ಇಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಶಂಶಾದಬೇಗಂ ಆಯ್ಕೆಯಾದರು. ಪಟ್ಟಣದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮತದಾನ ನಡೆಯಿತು.

ಒಟ್ಟು 26 ಮತಗಳ ಪೈಕಿ ಎಲ್ಲಾ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಶಂಶಾದಬೇಗಂ ಅವರು 15 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಪ್ರತಿ ಸ್ಪರ್ಧಿ ತುಗ್ಲೆಪ್ಪ ಅವರು 11 ಮತಗಳನ್ನು ಪಡೆದು ಪರಾಭವಗೊಂಡರು.

ನೂತನ ಅಧ್ಯಕ್ಷೆ ಶಂಶಾದಬೇಗಂ ಮಾತನಾಡಿ, ತಾಲ್ಲೂಕಿನ ನೌಕರರು ಹಾಗೂ ಶಿಕ್ಷಕರ ಸಹಕಾರದಿಂದ ಗೆಲುವು ಸಾಧಿಸಿದ್ದೇನೆ. ಎನ್ಪಿಎಸ್ ನೌಕರರ ಧ್ವನಿಯಾಗಿ ಹಳೆಯ ಪಿಂಚಣಿ ಯೋಜನೆಯ ಸೌಲಭ್ಯ ನೀಡುವಂತೆ (ಒಪಿಎಸ್) ಹೋರಾಟ ನಡೆಸಲಾಗುವುದು. ಎನ್ಪಿಎಸ್ ವಿರುದ್ದ ನಿರಂತರವಾಗಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ತಮ್ಮ ಅವಧಿಯಲ್ಲಿ ನೌಕರರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ರಾಜ್ಯ, ಜಿಲ್ಲಾ ಸಂಘದ ಸಹಕಾರದಿಂದ ತಾಲ್ಲೂಕಿನಲ್ಲಿ ನೌಕರರ ಭವನ ಹಾಗೂ ವಸತಿ ಗೃಹ ನಿರ್ಮಾಣಕ್ಕೆ ಯತ್ನಿಸಲಾಗುವುದು. ನೌಕರರ ಹಿತಾಸಕ್ತಿ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ್, ಗಂಗಾವತಿ ತಾಲ್ಲೂಕು ಮಾಜಿ ಅಧ್ಯಕ್ಷ ವಿಜಯಪ್ರಸಾದ ಅರ್ಚಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ಕಲ್ಲೂರು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ನೌಕರರ ಸಂಘದ ತಾಲ್ಲೂಕು ನಿರ್ದೇಶಕರಾದ ಶೇಖರಯ್ಯ ಕಲ್ಮಠ, ಉಮೇಶ ಕಂದಕೂರು, ಜಗದೀಶ ಟಿ.ಎಸ್, ಜಿಪಿಟಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕನಕರಾಯ, ಗೌರವಾಧ್ಯಕ್ಷ ಹನುಮಂತಪ್ಪ ಪಚ್ಚಿ, ಶಿಕ್ಷಕರಾದ ಪರಶುರಾಮ, ಮಂಜುನಾಥ ಉದ್ದಿಹಾಳ, ಶಂಕರಗೌಡ ಪೊಲೀಸ್ ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿಪ್ಪಣ್ಣ ಮಡಿವಾಳರ, ಯುವ ಮುಂದಾಳುಗಳಾದ ಅನ್ನು ಚಳ್ಳಮರದ, ಶಿವಕುಮಾರ ಈಚನಾಳ ಹಾಜರಿದ್ದರು.

ಪೊಲೀಸ್ ಇನ್ಸ್ಪೆಕ್ಟರ್ ಎಂ.ಡಿ. ಫೈಜುಲ್ಲಾ ಅವರು ಬಂದೊಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.