ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ: ಅಕ್ರಮವಾಗಿ ಕಿತ್ತೊಯ್ದಿದ್ದ ಗ್ರಿಲ್‌ ವಶಕ್ಕೆ ಪಡೆದ ಗ್ರಾ.ಪಂ

Published : 23 ಸೆಪ್ಟೆಂಬರ್ 2024, 14:24 IST
Last Updated : 23 ಸೆಪ್ಟೆಂಬರ್ 2024, 14:24 IST
ಫಾಲೋ ಮಾಡಿ
Comments

ಕನಕಗಿರಿ: ‘ಸಮೀಪದ ಹುಲಿಹೈದರ ಗ್ರಾಮದ ಸಮೀಪ ಹಾಯ್ದಿರುವ ಬೀದರ್‌–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಅಳವಡಿಸಿದ್ದ ಗ್ರಿಲ್‌ಗಳನ್ನು ಕೆಲವರು ಅಕ್ರಮವಾಗಿ ಕಿತ್ತೊಯ್ದಿದ್ದರು. ಅವುಗಳನ್ನು ಸೋಮವಾರ ಕಾರ್ಯಾಚರಣೆ ನಡೆಸಿದ ಪಿಡಿಒ ಹಾಗೂ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಗ್ರಿಲ್‌ಗಳು ಸುಮಾರು ₹ ಲಕ್ಷ ಮೌಲ್ಯದ ಗ್ರಿಲ್‌ಗಳನ್ನು ವಶಪಡಿಸಿಕೊಂಡು, ಪಂಚಾಯಿತಿಯಲ್ಲಿ ಇಡಲಾಗಿದೆ. ಕಳೆದ 8 ವರ್ಷಗಳ ಸಾರ್ವಜನಿಕರ ಸುರಕ್ಷತೆಗಾಗಿ ಕೆಎನ್‌ಆರ್‌ ಕಂಪನಿಯವರು ಹೆದ್ದಾರಿಯ ಎರಡು ಬದಿಯಲ್ಲಿ ಗ್ರಿಲ್ ಅಳವಡಿಸಿದ್ದರು. ಅವುಗಳನ್ನು ಗ್ರಾಮದ ಕೆಲವರು, ಹಣಕ್ಕಾಗಿ ಮಾರಾಟ ಮಾಡಲು ಅಕ್ರಮವಾಗಿ ಕೊಂಡೊಯ್ದು ತಮ್ಮ ಮನೆಯ ಆವರಣ, ಚಾವಣಿ, ಮತ್ತು ಮನೆಯ ಹಿಂದೆ ಸಂಗ್ರಹಿಸಿದ್ದರು. ಗುಜರಿಯವರಿಗೆ ಮಾರಾಟಕ್ಕೆ ಇಟ್ಟಿದ್ದ ಒಟ್ಟು 25ಕ್ಕೂ ಹೆಚ್ಚು ಗ್ರಿಲ್‌ಗಳನ್ನು ಪಿಡಿಒ ಅಮರೇಶ ರಾಠೋಡ, ಕರ ವಸೂಲಿಗಾರ ನಾಗೇಶ‌ ನಾಯಕ ಹಾಗೂ ತಂಡದವರು ಗ್ರಿಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT