ದಿನ ಭವಿಷ್ಯ: ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿಂದ ಸಮಾಧಾನವಾಗುವುದು
Published 2 ಅಕ್ಟೋಬರ್ 2023, 23:30 IST
ಪ್ರಜಾವಾಣಿ ವಿಶೇಷ
ಮೇಷ
ಜನಗಳ ಕೆಟ್ಟ ದೃಷ್ಟಿಯ ಫಲವಾಗಿ ಜತೆಯಲ್ಲಿ ಸೋಮಾರಿತನ ಸೇರಿಕೊಂಡು ಉದ್ಯೋಗ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ವ್ಯಾಪಾರದಲ್ಲಿ ಉಂಟಾಗುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವಿರಿ.
02 ಅಕ್ಟೋಬರ್ 2023, 23:30 IST
ವೃಷಭ
ಲಾಭ ನಿರೀಕ್ಷೆಯಿಲ್ಲದೆ ಮಾಡಿದ ಕೆಲಸದಲ್ಲೂ ಅನಿರೀಕ್ಷಿತ ಲಾಭವಾಗಿರುವುದರಿಂದ ಸಂತೋಷ ಆಗುವುದು. ಶಿಕ್ಷಕ ವೃತ್ತಿಯಲ್ಲಿ ಸಾಧನೆ ತೋರಿ ಪ್ರಶಸ್ತಿ ಪಡೆಯುವಂತಾಗಲಿದೆ. ಸುಗಂಧ ದ್ರವ್ಯದ ಮಾರಾಟದಲ್ಲಿ ಲಾಭ ಸಿಗಲಿದೆ.
02 ಅಕ್ಟೋಬರ್ 2023, 23:30 IST
ಮಿಥುನ
ವಿದ್ಯಾರ್ಥಿಗಳು ತಮ್ಮ ವಿಶೇಷ ಅಧ್ಯಯನ ಕ್ಷೇತ್ರಗಳಲ್ಲಿ ಮುಂದುವರಿಯಲು ಬಹಳಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ. ಮನಸ್ಸಿನಲ್ಲಿ ಹಲವು ದಿನಗಳಿಂದ ಕಾಡುತ್ತಿರುವ ಸಮಸ್ಯೆಗಳಿಗೆ ಇಂದು ಉತ್ತರ ಸಿಗುವುದು.
02 ಅಕ್ಟೋಬರ್ 2023, 23:30 IST
ಕರ್ಕಾಟಕ
ಸೇವಕ ವರ್ಗದವರಲ್ಲಿ ಪ್ರೀತಿ ವಿಶ್ವಾಸದಿಂದ ವ್ಯವಹರಿಸಿ. ಸೇವಕ ವರ್ಗದ ಜನರ ಮೇಲಿನ ದೃಷ್ಟಿಕೋನ ಬದಲಾಯಿಸುವುದರಿಂದ ಹೆಚ್ಚಿನ ಅನುಕೂಲ. ಸ್ಟೇಷನರಿ ವ್ಯಾಪಾರ ಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸುವಿರಿ.
02 ಅಕ್ಟೋಬರ್ 2023, 23:30 IST
ಸಿಂಹ
ಕೈಗಾರಿಕೋದ್ಯಮಿಗಳು ಲಾಭದಾಯಕ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಬುದ್ಧಿವಂತಿಕೆಯನ್ನು ಉಪಯೋಗಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿಂದ ಸಮಾಧಾನವಾಗುವುದು.
02 ಅಕ್ಟೋಬರ್ 2023, 23:30 IST
ಕನ್ಯಾ
ಕಾರ್ಮಿಕರು ಸಹನಶೀಲರಾಗಿ ಕೆಲಸದ ಬಗ್ಗೆ ಸರಿಯಾಗಿ ಗಮನವಹಿಸುವುದರಿಂದ ಯಶಸ್ಸು ಪಡೆಯಬಹುದು. ಗೃಹೋಪಕರಣಗಳ ಖರೀದಿ ಅಥವಾ ನೂತನ ವಸ್ತ್ರವನ್ನು ಖರೀದಿ ಮಾಡುವ ಯೋಗವಿದೆ.
02 ಅಕ್ಟೋಬರ್ 2023, 23:30 IST
ತುಲಾ
ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿರುವವರಿಗೆ ವಿಶೇಷ ರೀತಿಯ ಉತ್ತಮ ಅವಕಾಶಗಳ ಜೊತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಯೋಚನೆ ಹಾಗೂ ಅದಕ್ಕೆ ಬೇಕಾದ ಆರ್ಥಿಕ ಸಹಾಯದ ಜತೆಯಲ್ಲಿ ಜನಬಲ ಸಿಗಲಿದೆ.
02 ಅಕ್ಟೋಬರ್ 2023, 23:30 IST
ವೃಶ್ಚಿಕ
ಕೈಗಾರಿಕೋದ್ಯಮಿಗಳು ತಮ್ಮ ಕಂಪನಿಯ ತಯಾರಿಕಾ ಘಟಕದ ಅಭಿವೃದ್ಧಿಯನ್ನು ಮಾಡುವ ಬಗ್ಗೆ ಗಮನಹರಿಸಬಹುದು. ದ್ರವರೂಪದ ವಸ್ತುವಿನ ಅದರಲ್ಲೂ ತೈಲಗಳ ಮಾರಾಟದಲ್ಲಿ ಅಧಿಕ ಲಾಭವಿರುವುದು.
02 ಅಕ್ಟೋಬರ್ 2023, 23:30 IST
ಧನು
ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರದೊಂದಿಗೆ ಲಾಭ ಸಿಗಬಹುದು. ಮೆಚ್ಚಿದವರ ಜತೆಗೆ ಮದುವೆಯಾಗಲು ಮನೆಯ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ಫೈನಾನ್ಸ್ನವರಿಗೆ ಆದಾಯ ವೃದ್ಧಿಯಾಗುತ್ತದೆ.
02 ಅಕ್ಟೋಬರ್ 2023, 23:30 IST
ಮಕರ
ಸಿದ್ಧ ಉಡುಪುಗಳ ಮಾರಾಟಗಾರರಿಗೆ ತಮ್ಮ ರಫ್ತು ವ್ಯಾಪಾರಗಳಿಂದ ಹೆಚ್ಚಿನ ಲಾಭ ಪಡೆಯಬಹುದು. ಅನವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಉತ್ತಮವಾದ ಆದಾಯ ಬರುವುದು.
02 ಅಕ್ಟೋಬರ್ 2023, 23:30 IST
ಕುಂಭ
ಸರ್ಕಾರಿ ಅಧಿಕಾರಿಗಳಲ್ಲಿ ವಿನಯ ಪೂರ್ವಕವಾಗಿ ನಡೆದುಕೊಳ್ಳುವುದರಿಂದ ಕೆಲಸ ಸರಾಗವಾಗಿ ನಡೆಯುವುದು. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯವಾಗುತ್ತದೆ.
02 ಅಕ್ಟೋಬರ್ 2023, 23:30 IST
ಮೀನ
ಸಂಘ ಸಂಸ್ಥೆಗಳ ಜವಾಬ್ದಾರಿ ನೋಡುವವರಿಗೆ ನಾಲ್ಕಾರು ಮಾತು ಕೇಳಬೇಕಾಗುವುದು. ಅತೀವ ಪ್ರಯತ್ನದ ಫಲವಾಗಿ ಹೊರ ದೇಶದಲ್ಲಿ ಉದ್ಯೋಗ ದೊರಕಿಸಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ.
02 ಅಕ್ಟೋಬರ್ 2023, 23:30 IST