ಕೊಪ್ಪಳ/ ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಮರಳಿ ಅಳವಡಿಸಿದ್ದರೂ ಆಗುತ್ತಿದ್ದ ಸಣ್ಣ ಪ್ರಮಾಣದಲ್ಲಿನ ಸೋರಿಕೆಯನ್ನು ಈಗ ಸಂಪೂರ್ಣ ತಡೆಗಟ್ಟಲಾಗಿದೆ.

ಗೇಟ್‌ಗೆ ಐದು ಎಲಿಮೆಂಟ್‌ಗಳನ್ನು ಅಳವಡಿಸಿ ವ್ಯಾಪಕ ಪ್ರಮಾಣದಲ್ಲಿ ಪೋಲಾಗುತ್ತಿದ್ದ ನೀರನ್ನು ತಡೆಗಟ್ಟಲಾಗಿತ್ತು. ಆದರೂ ಸಣ್ಣ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದ್ದ ಕಾರಣ ತಜ್ಞರ ತಂಡ ಆಕ್ಸಿಜನ್ ಬಳಸಿಕೊಂಡು ನೀರಿನೊಳಗೆ ಕಾರ್ಯಾಚರಣೆ ನಡೆಸಿತು.

‘ಅಪಾಯಕಾರಿಯಾದ ಜಲಾಶಯದ ಕ್ರಸ್ಟ್‌ಗೇಟ್ ಬಳಿ ನೀರಿನೊಳಗೆ ಇಳಿದು ತಜ್ಞರು ಕಾರ್ಯ ನಿರ್ವಹಿಸಿ ಒಂದು ಹನಿ ನೀರು ಕೂಡ ಹೊರಹೋಗದಂತೆ ತಡೆಗಟ್ಟಿದ್ದಾರೆ’ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.

ನೀರಿನ ಸಂಗ್ರಹ ಏರಿಕೆ: ಜಲಾಶಯದ ಎಲ್ಲಾ ಗೇಟ್‌ಗಳನ್ನೂ ಬಂದ್ ಮಾಡಿ ನೀರು ಸಂಗ್ರಹಿಸಲಾಗುತ್ತಿದ್ದು, ಎರಡು ದಿನಗಳಲ್ಲಿ ನಾಲ್ಕು ಟಿಎಂಸಿ ಅಡಿಯಷ್ಟು ಹೆಚ್ಚಳವಾಗಿದೆ.

ಜಲಾಶಯದ ಸದ್ಯದ ಒಳಹರಿವಿನ ಪ್ರಮಾಣ 37,687 ಕ್ಯುಸೆಕ್ ಇದ್ದು, ಹೊರಹರಿವಿನ ಪ್ರಮಾಣ 10,275 ಕ್ಯುಸೆಕ್ ಇದೆ. ಇದೇ ರೀತಿ ಒಳಹರಿವಿನ ಪ್ರಮಾಣ ಮುಂದುವರಿದರೆ 10ರಿಂದ 15 ದಿನದೊಳಗೆ 90 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಭೇಟಿ: ಆಂಧ್ರಪ್ರದೇಶದ ರಾಯದುರ್ಗ ಕ್ಷೇತ್ರದ ಶಾಸಕ ಕಾಳವ ಶ್ರೀನಿವಾಸಲು ಸೋಮವಾರ ಜಲಾಶಯಕ್ಕೆ ಭೇಟಿ ನೀಡಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ನವಲಿ ಸೇರಿದಂತೆ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ಯಾವುದೇ ಜಲಾಶಯ ನಿರ್ಮಿಸುವುದಿದ್ದರೂ, ಮೂರು ರಾಜ್ಯಗಳ ಹಿತ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು’ ಎಂದರು.

‘ಸಮಾನಾಂತರ ಜಲಾಶಯಗಳನ್ನು ನಿರ್ಮಿಸುವ ಪ್ರಸ್ತಾಪವಿದ್ದು, ಸದ್ಯದ ಅಚ್ಚುಕಟ್ಟು ಪ್ರದೇಶಗಳಿಗೆ ಯೋಜನೆಗಳಿಂದ ಯಾವುದೇ ತೊಂದರೆಯಾಗದಿದ್ದರೆ ಸಹಕಾರ ನೀಡಲಾಗುತ್ತದೆ. 105 ಕಿಲೋಮೀಟರ್‌ಗಳ ಪ್ರವಾಹ ಕಾಲುವೆಯನ್ನು ಕರ್ನಾಟಕ ಸರ್ಕಾರ ನಿರ್ಲಕ್ಷಿಸಿತು’ ಎಂದೂ ಅವರು ಇದೇ ವೇಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.