ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ ‌| ಗಣಪತಿ ವಿಸರ್ಜನೆ ವೇಳೆ ಚಾಕು ಇರಿತ ಪ್ರಕರಣ: ಐವರ ಬಂಧನ

Published : 25 ಸೆಪ್ಟೆಂಬರ್ 2024, 16:32 IST
Last Updated : 25 ಸೆಪ್ಟೆಂಬರ್ 2024, 16:32 IST
ಫಾಲೋ ಮಾಡಿ
Comments

ಕೊಪ್ಪಳ: ಎರಡು ದಿನಗಳ ಹಿಂದೆ ಗಂಗಾವತಿಯಲ್ಲಿ ಗಣೇಶ ಪ್ರತಿಷ್ಠಾಪನೆಯ 17ನೇ ದಿನದ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ಚಾಕು ಇರಿತ ಘಟನೆಗೆ ಸಂಬಂಧಿಸಿದಂತೆ ಒಬ್ಬ ಬಾಲಕ ಸೇರಿ ಒಟ್ಟು ಐದು ಜನರನ್ನು ಬಂಧಿಸಲಾಗಿದೆ.

ಘಟನೆಯಲ್ಲಿ ಒಬ್ಬನಿಗೆ ಚಾಕು ಇರಿಯಲಾಗಿತ್ತು. ನಾಲ್ಕು ಜನರಿಗೆ ಗಾಯಗಳಾಗಿದ್ದವು. ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಬುಧವಾರ ಗಂಗಾವತಿಯ 24 ವರ್ಷದ ದುರ್ಗಾ ಮಣಿಕಂಠ, 25 ವರ್ಷದ ಎನ್‌. ಜಂಬಣ್ಣ, 19 ವರ್ಷದ ಅಬ್ಬಾಸ್‌ ಅಲಿ ಮತ್ತು 26 ವರ್ಷದ ಧರ್ಮ ಎಂಬುವವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

‘ಹಲ್ಲೆಗೆ ಒಳಗಾದವರು ಹಾಗೂ ಹಲ್ಲೆ ಮಾಡಿದ ಆರೋಪಿಗಳ ಒಬ್ಬರೂ ಗಂಗಾವತಿಯಲ್ಲಿ ಒಂದೇ ಬಡಾವಣೆಯ ನಿವಾಸಿಗಳಾಗಿದ್ದಾರೆ. ವೈಯಕ್ತಿಕ ಕಾರಣ ಮತ್ತು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಘಟನೆ ನಡೆದಿದ್ದು, ಗಂಗಾವತಿಯಲ್ಲಿ ಈಗ ಶಾಂತರೀತಿಯ ವಾತಾವರಣವಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT