ಮಂಡ್ಯ: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯ ರಾಮ ಮಂದಿರಕ್ಕಾಗಿ ಬಾಲರಾಮನ ಮೂರ್ತಿ ಕೆತ್ತುವುದಕ್ಕೂ ಮೊದಲು ಕೆತ್ತಿದ್ದ ರಾಮಮೂರ್ತಿಯು ನಗರದ ಲೇಬರ್ ಕಾಲೊನಿಯ ರಾಮಮಂದಿರಲ್ಲಿ ಜ.22ರಂದೇ ಪ್ರತಿಷ್ಠಾಪನೆಗೊಳ್ಳಲಿದೆ.

‘ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿ ಬಹಿರಂಗಗೊಂಡಿಲ್ಲ. ರಾಮ, ಲಕ್ಷ್ಮಣ, ಸೀತೆ, ಹನುಮಂತ ಮೂರ್ತಿಗಳ ಜೊತೆ ಅರುಣ್ ಯೋಗಿರಾಜ್ ಇರುವ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಮಂಡ್ಯ ರಾಮ ಮಂದಿರಕ್ಕಾಗಿ ಕೆತ್ತನೆ ಮಾಡಿರುವ ಮೂರ್ತಿಗಳಿವೆ’ ಎಂದು ಲೇಬರ್ ಕಾಲೊನಿ ರಾಮಮಂದಿರ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.

ವರ್ಷದ ಹಿಂದೆಯೇ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿಕೊಟ್ಟಿರುವ ಮೂರ್ತಿಗಳನ್ನು ಟ್ರಸ್ಟ್ ಸದಸ್ಯರು ಭತ್ತದ ಹೊಟ್ಟು, ಹುಲ್ಲಿನ ನಡುವೆ ಜೋಪಾನವಾಗಿಟ್ಟಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ದೇವಾಲಯ ಉದ್ಘಾಟಿಸಿ, ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿದೆ.

ಅಯೋಧ್ಯೆ ಮಾದರಿಯಲ್ಲೇ ಜ.19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಅಷ್ಟಬಂಧ ಬ್ರಹ್ಮ ಕಲಶ ಮಹೋತ್ಸವ, ಆಲಯ ಪರಿಗ್ರಹ, ಗುರು- ಗಣಪತಿ ಪೂಜೆ, ಋತ್ವಿಗವರ್ಣನೆ, ಪಂಚಗವ್ಯ ಹವನ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.