ಮಂಡ್ಯ: ‘ಅಪಪ್ರಚಾರದಿಂದ ದುದ್ದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ, ಅವರನ್ನು ಪ್ರಿತಿ ವಿಶ್ವಾಸದಿಂದ ಗೆಲ್ಲಬೇಕು. ಈ ಭಾಗದಲ್ಲಿ ನಾನು ಮಾಡಿರುವ ಕೆಲಸಗಳು ಜನರ ಮನಸ್ಸಿನಲ್ಲಿವೆ’ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲ್ಲೂಕಿನ ದುದ್ದ ಹೋಬಳಿಯ ಮುದಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ದುದ್ದ ಹೋಬಳಿಯ ಜನತೆ ನನ್ನನ್ನು ಮನೆಯ ಮಗ ಎಂದು ಅರ್ಥೈಸಿಕೊಂಡು ಅತೀ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿ ಹಾಗೂ ಅಲ್ಲಿಯ ಮುಖಂಡರು ಸೋಲಿನ ಭಯದಿಂದ ಹತಾಶೆಯಿಂದ ಅಪಪ್ರಚಾರದ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಅವರಿಗೆ ಏನೂ ಪ್ರಯೋಜನ ಇಲ್ಲ’ ಎಂದರು.

‘ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಳೆದ ಚುನಾವಣೆಯಲ್ಲಿ ಜನರು 70 ಸಾವಿರ ಮತಗಳನ್ನು ಕೊಟ್ಟಿದ್ದಾರೆ. ಅಷ್ಟು ಮತ ಪಡೆದ ಅವರು ಜನರ ಸೇವೆ ಮಾಡಬೇಕಾಗಿತ್ತು. ಆದರೆ ನಾಲ್ಕೂವರೆ ವರ್ಷಗಳಿಂದ ಕ್ಷೇತ್ರದಲ್ಲೇ ಇಲ್ಲದ ಅವರು ಈಗ ಚುನಾವಣೆ ವೇಳೆ ಬಂದು ಜನಮನ ದರ್ಶನ ಮಾಡುತ್ತಿದ್ದಾರೆ. ಜನರಿಂದಲೇ ಬಂಡವಾಳ ಹಾಕಿಸಿ ನಾಟಕವಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜೆಡಿಎಸ್ ಮುಖಂಡ ಬಾಲರಾಜು, ಸಭೆಯಲ್ಲಿ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಮುಖಂಡರಾದ ಶಂಕರೇಗೌಡ, ಎಚ್.ಎಲ್.ಶಿವಣ್ಣ, ಶ್ಯಾಮ್ಸುಂದರ್, ಶಿವಳ್ಳಿ ಅಣ್ಣೇಗೌಡ, ಹಲಗಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.