ಮಂಡ್ಯ: ‘ಕಳೆದ ಚುನಾವಣೆಯಲ್ಲಿ ಮೋದಿ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟೆ. ನನ್ನ ಐದು ವರ್ಷಗಳ ಅಧಿಕಾರವಧಿಯಲ್ಲಿ ಸ್ವಂತ ಕೆಲಸಗಳಿಗೆ ಸಮಯ ಸಿಕ್ಕಿರಲಿಲ್ಲ. ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಮಯ ತೆಗೆದುಕೊಂಡಿದ್ದೆ’ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
.ಅಂಬರೀಷ್ 72ನೇ ಜನ್ಮದಿನಾಚರಣೆ: ‘ಅಂಬಿ’ಯನ್ನು ಸ್ಮರಿಸಿದ ಸುಮಲತಾ, ಶಿವಣ್ಣ –ದರ್ಶನ್.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ ಅಗತ್ಯ ಬಿದ್ದಾಗ ಪಕ್ಷದ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು ಅಂತ ಹೈಕಮಾಂಡ್ಗೆ ತಿಳಿಸಿದ್ದೇನೆ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಜನವರಿ ನಂತರ ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಂಡು, ಬಿಜೆಪಿಯ ಸಂಘಟನಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇನೆ’ ಎಂದರು.

ಬೆಂಬಲಿಗರು ಅಧಿಕಾರ ಸಿಗಲಿ ಎನ್ನುವುದು ತಪ್ಪಿಲ್ಲ. ಸದ್ಯಕ್ಕೆ ಮೂರು ನಾಲ್ಕು ತಿಂಗಳಲ್ಲೇ ಎಲ್ಲಾ ಆಗಿ ಬಿಡಬೇಕು ಅಂತ ಏನಿಲ್ಲ. ನಮಗೂ ಸಮಯ ಬೇಕು, ಅವರಿಗೂ ಸಮಯ ಬೇಕು. ಹೀಗಾಗಿ ನಾನು ಯಾವುದನ್ನೂ ನೆಗೆಟಿವ್ ಆಗಿ ನೋಡುವುದಿಲ್ಲ ಎಂದರು.
.ಅಭಿವೃದ್ಧಿಗೆ ಮುಖ್ಯಮಂತ್ರಿ ಮಗನೇ ಸಂಸದನಾಗಬೇಕೆ? ಸುಮಲತಾ ಅಂಬರೀಷ್.
‘ಪಕ್ಷದಿಂದ ಸೂಚನೆ ಬಂದರೆ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಿದ್ದರೆ ಪ್ರಚಾರಕ್ಕೆ ನನ್ನನ್ನು ಕರೆಯುತ್ತಿದ್ದರು. ಮೈತ್ರಿ ಅಭ್ಯರ್ಥಿ ಇರುವುದರಿಂದ ಕರೆದಿಲ್ಲ ಅನಿಸುತ್ತೆ. ನಮಗೆ ಏನೂ ದ್ವೇಷವಿಲ್ಲ’ ಎಂದು ಸುಮಲತಾ ಹೇಳಿದರು.
.ಧೋನಿಗೆ ₹2 ಲಕ್ಷ ನೀಡಿದ್ದ ಅಂಬರೀಷ್: ನೆನಪು ಮೆಲುಕು ಹಾಕಿದ ಸಂಸದೆ ಸುಮಲತಾ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.