ಮಂಡ್ಯ: ‘ಸಚಿನ ಸ್ಥಾನ ಬೇಡಿಕೆಯಲ್ಲ, ನನ್ನ ಹಕ್ಕು. ಮುಂದಿನ ಸಚಿವ ಸಂಪುಟದ ಪುನರ್ ರಚನೆ ವೇಳೆ ಸಚಿವ ಸ್ಥಾನ ಪಡೆದೇ ತೀರುವೆ’ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶಪಥ ಮಾಡಿದ್ದಾರೆ.

‘ಆಪರೇಷನ್ ಕಮಲ’ ವಿಚಾರ ಸದ್ದು ಮಾಡುತ್ತಿರುವ ಹೊತ್ತಲ್ಲಿ ಸಚಿವ ಸ್ಥಾನ ಸಿಗದಿರುವ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ಅತೃಪ್ತಿ ಹೊರಹಾಕಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಕಾಂಗ್ರೆಸ್ನಲ್ಲೂ ಕಿಂಡರ್ ಗಾರ್ಟನ್ ಇದೆ. ರಾಜಕೀಯ ಹಿನ್ನೆಲೆ ಇದ್ದರೆ ಸ್ಥಾನಮಾನ ಸಿಗಲಿದೆ. ಆದರೆ, ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಜಿಲ್ಲೆಯ ಕಾಂಗ್ರೆಸ್ನಲ್ಲಿ ನಾನೇ ಹಿರಿಯ. ಪಕ್ಷ ಕಟ್ಟಿದ್ದೇ ನಾನು. ನನಗೆ ಹಕ್ಕಿಲ್ವಾ? ನನಗೆ ಯೋಗ್ಯತೆ, ಅರ್ಹತೆ, ಹಿರಿತನ ಎಲ್ಲವೂ ಇವೆ’ ಎಂದು ಹೇಳಿದ್ದಾರೆ.

‘ವಿದ್ಯಾರ್ಥಿ ದೆಸೆಯಿಂದಲೂ ಪಕ್ಷ ಕಟ್ಟಿದವನು ನಾನು. ಸಚಿವ ಸ್ಥಾನಕ್ಕೆ ಮೊದಲು ನನ್ನ ಹೆಸರು ಇತ್ತು. ಆನಂತರ ಬದಲಾವಣೆ ಆಯಿತು. ನನ್ನ ಹಣೆಬರಹ ಸರಿಯಿಲ್ಲ. ನತದೃಷ್ಟ ನಾನು. ಇದರಿಂದಾಗ ಪಕ್ಷದ ಜೊತೆ ಸಂಘರ್ಷ ಮಾಡುವ ಪರಿಸ್ಥಿತಿ ಇದೆ’ ಎಂದು ಅತೃಪ್ತಿ ಹೊರಹಾಕಿದ್ದಾರೆ.

ನನ್ನನ್ನು ಯಾರೂ ಸಂಪರ್ಕಿಸಿಲ್ಲ

ಬಿಜೆಪಿಯಿಂದ ಆಫರ್ ಬಂದಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ‘ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿ ಸ್ವಂತ ಕಾಲಿನಿಂದ ನಿಂತಿಲ್ಲ, ನಿಲ್ಲವುದಕ್ಕೂ ಆಗಲ್ಲ. ಬಿಜೆಪಿ ಇನ್ನು ಮುಳುಗುವ ಹಡಗು. ಮಣಿಪುರದ ಕತೆ ಏನಾಗುತ್ತಿದೆ? ರೈತರಿಗಾಗಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ?. ನಬಾರ್ಡ್ ಅನುದಾನ ಏಕೆ ಕಡಿಮೆ ಮಾಡಿದೆ? ಇವೆಲ್ಲವೂ ಬಿಜೆಪಿಗೆ ಮುಳುವಾಗಿದೆ’ ಎಂದು ಶಾಸಕ ನರೇಂದ್ರಸ್ವಾಮಿ ಟೀಕಿಸಿದರು.

‘ಮುಂದಿನ ಚುನಾವಣೆಯಲ್ಲೂ ಯಾವುದೇ ಕಾರಣಕ್ಕೂ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಗತಿ ಇಲ್ಲದೇ ಬಿಜೆಪಿಯವರು ಸದಾಕಾಲ ‘ಆಪರೇಷನ್’ನಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡುವ ಯತ್ನ ವಿಫಲವಾಗಿದೆ. ಹೀಗಾಗಿ ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.