ಬೆಳೆ ಹಾನಿ ಸಮೀಕ್ಷೆಗೆ 10 ದಿನಗಳ ಗಡುವು
‘ಮಳೆ/ನೆರೆಯಿಂದ ಜಿಲ್ಲೆಯಲ್ಲಿ 4 ಮನೆಗಳು ಸಂಪೂರ್ಣ ಮತ್ತು 32 ಮನೆಗಳು ಭಾಗಶಃ ಹಾನಿಗೊಂಡಿವೆ. ಎಸ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುತ್ತಿದೆ. ಸುಮಾರು 249.1 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈಗಾಗಲೇ 80 ಹೆಕ್ಟೇರ್ ಸಮೀಕ್ಷೆ ಮುಗಿದಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ಸಭೆಗೆ ಮಾಹಿತಿ ನೀಡಿದರು. ಕೃಷಿ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿಯ ಸ್ಥಳ ಸಮೀಕ್ಷೆ ಮಾಡಿ 10 ದಿನದ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು.