ಮಂಡ್ಯ: ‘ಲೇಖಕರು, ಸಾಹಿತಿಗಳೇ ಅಲ್ಲದವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಅದು ಕನ್ನಡ ಸಾಹಿತ್ಯಕ್ಕೆ ಮಾಡಿದ ದೊಡ್ಡ ದ್ರೋಹ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ನಡೆದ ‘ವಾರದ ಅತಿಥಿ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಿಸೆಂಬರ್ 20ರಿಂದ 22ರವರೆಗೆ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತ್ಯೇತರರನ್ನೂ ಪರಿಗಣಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರು ಹೇಳಿಕೆ ತೇಲಿಬಿಟ್ಟಿರುವುದು ಎಷ್ಟು ಸಮಂಜಸ’ ಎಂದು ಪ್ರಶ್ನಿಸಿದರು.

‘ಮಹೇಶ್ ಜೋಶಿ ಅವರು ಕೆಲವು ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಪರೋಕ್ಷವಾಗಿ ಹೇಳಿರುವ ಬಗ್ಗೆ ಯೋಚನೆ ಮಾಡಬೇಕಿದೆ. ಸಾಹಿತ್ಯ ಪುರೋಭಿವೃದ್ಧಿಗಾಗಿ ಶ್ರಮಿಸುತ್ತಿರುವವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಸಾಹಿತಿಗಳಲ್ಲದವರು ಕಸಾಪ ಅಧ್ಯಕ್ಷರಾದರೆ ಈ ರೀತಿಯ ಎಡವಟ್ಟುಗಳು ಆಗುತ್ತವೆ. ಯಾರದೋ ಒತ್ತಡ ಇದೆ ಎಂಬ ಮಾತ್ರಕ್ಕೆ ಯಾರ್ಯಾರೋ ಹೆಸರನ್ನು ತೇಲಿ ಬಿಡುವುದು ಸರಿಯಲ್ಲ’ ಎಂದರು.

‘ಸ್ವಾಮೀಜಿಗಳ ಹೆಸರನ್ನು ಮುನ್ನಲೆಗೆ ತಂದರೆ ಜನರ ಬಾಯಿಯನ್ನು ಮುಚ್ಚಿಸಬಹುದೆಂಬ ಭಾವನೆ ಇರಬಹುದು. ಸಾಹಿತ್ಯ ಎಂಬ ಪ್ರಜ್ಞೆ ಕನ್ನಡದ ಪ್ರಜ್ಞೆ. ಸಾಹಿತ್ಯ ಭಾಷೆಯ ಮೂಲಕ ಘಟಿಸುತ್ತಿರುವ ಒಂದು ವಿದ್ಯಮಾನ. ಭಾಷೆಯನ್ನು ಪ್ರಧಾನವಾದ ಸಾಧನವನ್ನಾಗಿಸಿಕೊಂಡು ಕನ್ನಡ ಕಟ್ಟುವಂತಹ ಕೆಲಸವನ್ನು ಸಾಹಿತಿಗಳು ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಜಾರಿಯಾಗಬೇಕಾದರೆ ಕಸಾಪ ಅಧ್ಯಕ್ಷರು ಸರ್ಕಾರದ ಗಮನ ಸೆಳೆಯಬೇಕು. ಆದರೆ ಈ ಕೆಲಸ ನಡೆಯುತ್ತಿಲ್ಲ. ಅಧ್ಯಕ್ಷರು ಸಾಹಿತಿಗಳನ್ನು ಪರಿಗಣನೆಗೆ ತೆಗೆದುಕೊಂಡು ನಮ್ಮನ್ನು ಕರೆದರೆ ನಾವೂ ನಿಯೋಗ ಹೋಗಿ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಆದರೆ, ಯಾರೂ ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದು ವಿಷಾದಿಸಿದರು.

‘ಲೇಖಕರು ಬದುಕನ್ನು ಹೇಗೆ ನಡೆಸಬೇಕೆಂಬ ದಾರಿ ತೋರಿಸುವವರಾಗಿದ್ದು, ಲೇಖಕರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಉಳಿಸುವುದೇ ಆದರೆ ಸಮ್ಮೇಳನಕ್ಕೆ ನೀಡುವ ಹಣವನ್ನು ಶಾಲೆಗಳ ಉದ್ಧಾರಕ್ಕೆ ಬಳಕೆ ಮಾಡಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಯಾರದೋ ಒತ್ತಡದಿಂದ ತೇಲಿ ಬರುತ್ತಿರುವ ಹೆಸರುಗಳು’

‘ಮಹೇಶ್ ಜೋಶಿ ಅವರು ಕೆಲವು ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಪರೋಕ್ಷವಾಗಿ ಹೇಳಿರುವ ಬಗ್ಗೆ ಯೋಚನೆ ಮಾಡಬೇಕಿದೆ. ಸಾಹಿತ್ಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಸಾಹಿತಿಗಳಲ್ಲದವರು ಕಸಾಪ ಅಧ್ಯಕ್ಷರಾದರೆ ಈ ರೀತಿಯ ಎಡವಟ್ಟುಗಳು ಆಗುತ್ತವೆ. ಯಾರದೋ ಒತ್ತಡ ಇದೆ ಎಂಬ ಮಾತ್ರಕ್ಕೆ ಯಾರ್ಯಾರೋ ಹೆಸರನ್ನು ತೇಲಿ ಬಿಡುವುದು ಸರಿಯಲ್ಲ’ ಎಲ್.ಎನ್. ಮುಕುಂದರಾಜ್ ಹೇಳಿದರು. ‘ಸ್ವಾಮೀಜಿಗಳ ಹೆಸರನ್ನು ಮುನ್ನಲೆಗೆ ತಂದರೆ ಜನರ ಬಾಯಿಯನ್ನು ಮುಚ್ಚಿಸಬಹುದೆಂಬ ಭಾವನೆ ಇರಬಹುದು. ಸಾಹಿತ್ಯ ಎಂಬ ಪ್ರಜ್ಞೆ ಕನ್ನಡದ ಪ್ರಜ್ಞೆ. ಸಾಹಿತ್ಯ ಭಾಷೆಯ ಮೂಲಕ ಘಟಿಸುತ್ತಿರುವ ಒಂದು ವಿದ್ಯಮಾನ. ಭಾಷೆಯನ್ನು ಪ್ರಧಾನವಾದ ಸಾಧನವನ್ನಾಗಿಸಿಕೊಂಡು ಕನ್ನಡ ಕಟ್ಟುವಂತಹ ಕೆಲಸವನ್ನು ಸಾಹಿತಿಗಳು ಮಾಡುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.