ಮಂಡ್ಯ: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ನಡೆಸಿದ್ದು, ಹಬ್ಬದ ಮುನ್ನಾ ದಿನವಾದ ಗುರುವಾರ ಬೆಲೆ ಏರಿಕೆ ನಡುವೆಯೂ ಹೂ, ಹಣ್ಣು ಖರೀದಿ ಜೋರಾಗಿ ನಡೆಯಿತು.

ಮನೆಗಳಲ್ಲಿ ಪೂಜೆಗೆಂದು ವರಮಹಾಲಕ್ಷ್ಮಿ ಮೂರ್ತಿಯನ್ನಿಟ್ಟು ದೇವತಾ ಕಾರ್ಯಗಳನ್ನು ಮಾಡಲಾಗುತ್ತದೆ. ಇದಕ್ಕೆ ಅಗತ್ಯವಿರುವ ಲಕ್ಷ್ಮಿ ಮೂರ್ತಿಗೆ ಚಿನ್ನ ಬೆಳ್ಳಿಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಹಣದ ಸಮೇತ ಸಿಹಿ ಸಜ್ಜಿಗೆ, ಫಲಪಂಚಾಮೃತದೊಂದಿಗೆ ಹಬ್ಬ ಆಚರಿಸುವುದು ವಿಶೇಷವಾಗಿದೆ.

ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಕನಕಾಂಬರ, ಮಲ್ಲಿಗೆ, ಕಾಕಡ, ಮರಳೆ ಬೆಲೆ ಹೆಚ್ಚಳವಾಗಿ ಗ್ರಾಹಕರಿಗೆ ಹೊರೆಯಾಗಿದೆ.

ದರ ಏರಿಕೆ:

ಹಳದಿ ಮತ್ತು ಕೆಂಪು ಚೆಂಡು ಹೂವು ಪ್ರತಿ ಕೆ.ಜಿ.ಗೆ ₹40ರಿಂದ ₹60ಕ್ಕೆ, ಸಣ್ಣಗುಲಾಬಿ ₹100ರಿಂದ ₹250ಕ್ಕೆ ಸುಗಂಧರಾಜ ₹150ರಿಂದ ₹450ಕ್ಕೆ, ಬಟನ್ಸ್ ₹150ರಿಂದ ₹350ಕ್ಕೆ, ಗಣಗಲೆ ₹150ರಿಂದ ₹200ಕ್ಕೆ, ಸೇವಂತಿಗೆ ₹100ರಿಂದ ₹300ಕ್ಕೆ, ಬಿಳಿ ಸೇವಂತಿಗೆ ₹100ರಿಂದ ₹250ಕ್ಕೆ, ಕಲ್ಕತ್ತಾ ಮಲ್ಲಿಗೆ ₹250ರಿಂದ ₹700ಕ್ಕೆ, ಮಲ್ಲಿಗೆ ₹400ರಿಂದ ₹2000ಕ್ಕೆ, ಮರಳೆ ₹500ರಿಂದ ₹1,500ಕ್ಕೆ, ಕಾಕಡ ₹350ರಿಂದ ₹1000ಕ್ಕೆ, ಕನಕಾಂಬರ ₹800ರಿಂದ ₹3000ಕ್ಕೆ ಏರಿಕೆಯಾಗಿದೆ.

ಹಣ್ಣುಗಳು ದುಬಾರಿ:

ಹಣ್ಣುಗಳಲ್ಲಿ ಡ್ರ್ಯಾಗನ್ ಫ್ರೋಟ್, ಸೇಬು, ದಾಳಿಂಬೆ ಸೇರಿದಂತೆ ಕೆಲವು ಹಣ್ಣಿನ ಬೆಲೆಯಲ್ಲಿ ಏರಿಕೆ ಕಂಡಿದ್ದು, ಕೆಲವು ಹಣ್ಣಿನ ಬೆಲೆಯು ಸಾಧಾರಣವಾಗಿದೆ, ಅದರಲ್ಲಿ ಕಲ್ಲಂಗಡಿ ₹26, ಪಚ್ಚಬಾಳೆ ₹40, ಪಪ್ಪಾಯಿ ₹38, ಏಲಕ್ಕಿಬಾಳೆ ₹100, ಸೀಬೆ ₹60, ಕಿತ್ತಳೆ ₹170, ಮೂಸಿಂಬೆ ₹86, ಕಪ್ಪು ದ್ರಾಕ್ಷಿ ₹180, ಕಿವಿಹಣ್ಣು(ಬಾಕ್ಸ್)₹190, ಡ್ರ್ಯಾಗನ್ ಫ್ರೂಟ್ ₹198, ದಾಳಿಂಬೆ ₹320, ಆಸ್ಟ್ರೇಲಿಯಾ ಸೇಬು ₹296, ರಾಯಲ್ ಗಾಲ ಸೇಬು ₹296 ರಂತೆ ಪ್ರತಿ ಕೆ.ಜಿ.ಗೆ ಮಾರಾಟ ಮಾಡಲಾಗುತ್ತಿತ್ತು.

ನಗರದ ವಿವಿ ರಸ್ತೆ, 100 ಅಡಿ ರಸ್ತೆ, ಪೇಟೆ ಬೀದಿ, ಮಹಾವೀರ ವೃತ್ತ, ಬನ್ನೂರು ರಸ್ತೆ, ಗುತ್ತಲು ಬಡಾವಣೆಯಲ್ಲಿ ಮಾವಿನ ಸೊಪ್ಪು, ಬಾಳೆ ದಿಂಡನ್ನು ಮಾರಾಟಕ್ಕೆ ಅಲ್ಲಲ್ಲಿ ಕಿರಿದಾದ ಅಂಗಡಿಗಳ ರೀತಿ ತೆರೆದು ಮಾರಾಟ ಮಾಡುತ್ತಿರುವುದು ಕಂಡು ಬಂದಿತು.

ಒಂದು ಜೊತೆಗೆ ಬಾಳೆ ದಿಂಡು ₹60, ಒಂದು ಕಟ್ಟಿಗೆ ಮಾವಿನ ಸೊಪ್ಪಿನ ಜೊತೆ ಕಬ್ಬಿನ ಗರಿಯನ್ನು ₹10 ರಿಂದ ₹20ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಒಟ್ಟಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆಗಾಗಿ ಅಗತ್ಯ ಸಾಮಾಗ್ರಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಸಂಜೆಯಾಗುತ್ತಿದ್ದಂತೆ ಅಲ್ಲಲ್ಲಿ ಜನಜಂಗುಳಿ ಹೆಚ್ಚಿತ್ತು.

ತಮಿಳುನಾಡು ಮೈಸೂರು ಸೇರಿದಂತೆ ವಿವಿಧೆಡೆಯಿಂದ ಹೂಗಳನ್ನು ಮಂಡ್ಯ ಮಾರುಕಟ್ಟೆಗೆ ತರಿಸಿಕೊಂಡಿದ್ದೇವೆ. ವ್ಯಾಪಾರ ಭರ್ಜರಿಯಾಗಿದೆ
- ಪುಟ್ಟು ಹೂವಿನ ವ್ಯಾಪಾರಿ ಮಂಡ್ಯ

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆ ಹೆಚ್ಚಳವಾಗಿದೆ. ಹಬ್ಬಕ್ಕೆ ಅತ್ಯಗತ್ಯವಾಗಿರುವುದರಿಂದ ಗ್ರಾಹಕರು ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ
ಶಂಕರ್ ತಾವರೆಗೆರೆ ವ್ಯಾಪಾರಿ ಹಾಪ್‌ಕಾಮ್ಸ್ ಮಂಡ್ಯ

ಲಕ್ಷ್ಮೀ ಮುಖವಾಡಗಳಿಗೆ ಭಾರಿ ಬೇಡಿಕೆ

ಭಾರತೀನಗರ: ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು ಹಣ್ಣು ಇತ್ಯಾದಿ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ ಕಂಡಿದೆ. ಶುಕ್ರವಾರ ವರಮಹಾಲಕ್ಷ್ಮೀ ವ್ರತಾಚರಣೆ ಇದ್ದು ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಅಂಗಡಿಗಳಿಗೆ ಲಗ್ಗೆಯಿಟ್ಟು ತರಹೇವಾರಿ ಹಣ್ಣುಗಳು ಸಿಹಿ ತಿನಿಸುಗಳು ಹೂವುಗಳು ಲಕ್ಷ್ಮೀ ಮುಖವಾಡ ಖರೀದಿಸಿದರು.

ಮಾರು ಹೂವಿನ ದರ 150ರಿಂದ 200ರ ಗಡಿಯನ್ನೂ ದಾಟಿದೆ. ಪ್ರತಿ ಕೆ.ಜಿ. ಸೇಬಿನ ಹಣ್ಣಿನ ಬೆಲೆ 250ರ ಆಸುಪಾಸಿಗೆ ತಲುಪಿದೆ. ಇತರೆ ಹಣ್ಣುಗಳ ದರದಲ್ಲೂ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.