ಮಂಡ್ಯ: ಹಸಿ ಶುಂಠಿ ಬೆಲೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಪ್ರತಿ ಕೆ.ಜಿ ₹ 200ರಂತೆ ಮಾರಾಟವಾಗುತ್ತಿದೆ. ಬೀನ್ಸ್ ಬೆಲೆ ಕೊಂಚ ಇಳಿಕೆಯಾಗಿದ್ದರೂ ₹ 100 ಗಡಿಯಲ್ಲೇ ಇದ್ದು ಗ್ರಾಹಕರಿಗೆ ಹೊರೆಯಾಗಿದೆ. ಟೊಮೆಟೊ ಬೆಲೆ ಕಡಿಮೆಯಾಗಿದೆ.

ಶುಂಠಿ ಬೆಲೆ ಕಳೆದ ವಾರ ₹ 160ರಂತೆ ಮಾರಾಟವಾಗುತ್ತಿತ್ತು. ಈಗ ಪೂರೈಕೆ ಕಡಿಮೆಯಾಗಿದ್ದು ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಬೆಲೆ ಏರಿಕೆ ಕಾರಣದಿಂದಾಗಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಶುಂಠಿ ಮಾರಾಟವನ್ನೇ ನಿಲ್ಲಿಸಲಾಗಿದೆ. ಬಿರು ಬಿಸಿಲಿನ ಕಾರಣದಿಂದಾಗಿ ಶುಂಠಿ ಬೆಲೆಯಲ್ಲಿ ತೀವ್ರವಾಗಿ ಏರಿಕೆ ಕಂಡಿದೆ. ಬೀನ್ಸ್ ಕಳೆದ ವಾರ ₹ 120ಕ್ಕೆ ಮಾರಾಟವಾಗುತ್ತಿತ್ತು. ಈ ವಾರ ಕೊಂಚ ಕಡಿಮೆಯಾಗಿದ್ದು ₹ 100ರಂತೆ ಮಾರಾಟವಾಗುತ್ತಿದೆ.

ಬೀನ್ಸ್ ಜೊತೆಗೆ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ. ಪ್ರತಿ ಕಟ್ಟು ನಾಟಿ ಕೊತ್ತಂಬರಿ ₹ 30ಕ್ಕೆ ಮಾರಾಟವಾಗುತ್ತಿದೆ. ಮೆಂತೆ ಸೊಪ್ಪಿನ ಬೆಲೆ ತೀವ್ರ ಹೆಚ್ಚಾಗಿದ್ದು ಪ್ರತಿ ಕಟ್ಟಿಗೆ ₹ 60ರಂತೆ ಮಾರಾಟವಾಗುತ್ತಿದೆ. ನುಗ್ಗೆಕಾಯಿ ಬೆಲೆಯೂ ಏರಿಕೆಯಾಗಿದ್ದು ಪ್ರತಿ ಕೆ.ಜಿ ₹ 80ಕ್ಕೆ ಮಾರಾಟವಾಗುತ್ತಿದೆ.

ಉಳಿದಂತೆ ಟೊಮೆಟೊ ₹10, ಸಹಿಗುಂಬಳ, ಸೋರೆಕಾಯಿ, ಮೂಲಂಗಿ, ಎಲೆಕೋಸು ₹20, ಈರೇಕಾಯಿ, ಬೆಂಡೆಕಾಯಿ, ಸಿಹಿಗೆಣಸು, ಆಲೂಗೆಡ್ಡೆ, ಈರುಳ್ಳಿ ₹30, ಬೀಟ್‌ರೂಟ್ ₹40, ಹೂಕೋಸು ₹50, ಭಜಿಮೆಣಸಿನಕಾಯಿ, ಹಸಿರುಮೆಣಸಿನಕಾಯಿ, ಬದನೆಕಾಯಿ, ಸುವರ್ಣಗೆಡ್ಡೆ, ತೊಂಡೆಕಾಯಿ, ಗೋರಿಕಾಯಿ, ದಪ್ಪಮೆಣಸಿನಕಾಯಿ, ಕ್ಯಾರೆಟ್ ₹60ರಂತೆ ಮಾರಾಟವಾಗುತ್ತಿವೆ.

ಫಾರಂ ಬೀನ್ಸ್ ₹80, ನಾಟಿ ಬೀನ್ಸ್ ₹100, ಹಸಿಬಟಾಣಿ ₹120, ರಾಜ್‌ಈರುಳ್ಳಿ ₹160, ನಾಟಿಬೆಳ್ಳುಳ್ಳಿ, ಶುಂಠಿ ₹200ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿವೆ. ಒಂದು ನಿಂಬೆಹಣ್ಣಿಗೆ ₹6ರಂತೆ ಮಾರಾಟ ಮಾಡಲಾಗುತ್ತಿದೆ.

ಹಣ್ಣುಗಳಲ್ಲಿ ಸೇಬು ₹200, ಕಿವಿಹಣ್ಣು(ಬಾಕ್ಸ್), ಕಲ್ಲಂಗಡಿ ₹25, ಪಚ್ಚಬಾಳೆ, ಪಪ್ಪಾಯ ₹30, ಅನಾನಸ್, ಕರಬೂಜ ₹40, ಏಲಕ್ಕಿಬಾಳೆ ₹50, ಸೀಬೆ ₹60, ಮೂಸಂಬಿ, ಸಪೋಟ ₹80, ಕಂದ್ರಾಕ್ಷಿ ₹120, ಕಿತ್ತಳೆ, ದಪ್ಪದ್ರಾಕ್ಷಿ ₹140, ಕಪ್ಪುದ್ರಾಕ್ಷಿ, ದಾಳಿಂಬೆ ₹160ರಂತೆ ಮಾರಾಟವಾಗುತ್ತಿವೆ.

ಸೊಪ್ಪುಗಳಲ್ಲಿ ಸಬ್ಬಸಿಗೆ, ಮೆಂತೆ, ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆ ದುಬಾರಿಯಾಗಿದೆ. ಉಳಿದಂತೆ ಕೀರೆ ₹5, ದಂಟು, ಪುದಿನಾ, ಕರಿಬೇವು ₹10, ಕಿಲ್‌ಕೀರೆ ₹15, ನಾಟಿ ಕೊತ್ತಂಬರಿ ₹ 20, ಚಿಕ್ಕಿಸೊಪ್ಪು ₹30ರಂತೆ ಮಾರಾಟವಾಗುತ್ತಿವೆ.

ಹೂವುಗಳಲ್ಲಿ ಕನಕಾಂಬರ, ಮಲ್ಲಿಗೆ, ಕಾಕಡ ದುಬಾರಿ ಆಗಿದೆ. ಕೆಜಿ ಕೆಂಪು ಚೆಂಡು ಹೂ ₹ 100, ಹಳದಿ ಚೆಂಡುವೂ ₹ 120, ಸುಗಂಧ ರಾಜ ₹100, ಸಣ್ಣಗುಲಾಬಿ, ಕಲ್ಕತ್ತಾ ಮಲ್ಲಿಗೆ ₹150, ಗಣಗಲೆ ₹180, ಬಿಳಿ ಸೇವಂತಿ, ಬಟನ್ಸ್ ₹250, ಸೇವಂತಿಗೆ, ಮರಳೆ ₹500, ಕಾಕಡ ₹600, ಮಲ್ಲಿಗೆ ₹650, ಕನಕಾಂಬರ ₹800ರಂತೆ ಮಾರಾಟವಾಗುತ್ತಿವೆ.

ಮಾರು ತುಳಸಿ ₹30, ಕೆಂಪು ಚೆಂಡುಹೂ ₹30, ಹಳದಿ ಚೆಂಡು ಹೂ ₹40, ಕಾಕಡ, ಮರಳೆ ₹50, ಕನಕಾಂಬರ ₹60, ಬಟನ್ಸ್ ₹70, ಸೇವಂತಿಗೆ ₹80, ಬಿಳಿ ಸೇವಂತಿಗೆ ₹100, ಮಲ್ಲಿಗೆ ₹100ರಂತೆ ಮಾರಾಟವಾಗುತ್ತಿವೆ.

ತರಕಾರಿ, ಹಣ್ಣು ದರ ಪಟ್ಟಿ (₹ ಪ್ರತಿ ಕೆ.ಜಿ)

ನಾಟಿ ಬೀನ್ಸ್; 100

ನುಗ್ಗೇಕಾಯಿ; 80

ಹಸಿರು ಮೆಣಸಿನಕಾಯಿ; 60

ಕ್ಯಾರೆಟ್; 60

ಬೀಟರೂಟ್: 60

ಗೆಡ್ಡೆಕೋಸು; 80

ಟೊಮೆಟೊ; 10

ರಾಜ್ ಈರುಳ್ಳಿ; 160

ನಾಟಿ ಬೆಳ್ಳುಳ್ಳಿ; 160

ಸೇಬು; 200

ಕಪ್ಪು ದ್ರಾಕ್ಷಿ; 160

ಸಪೋಟ;80

ಕಿತ್ತಳೆ; 140

ಪಚ್ಚಬಾಳೆ; 30

ಏಲಕ್ಕಿಬಾಳೆ; ₹50

ದಾಳಿಂಬೆ; 160

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.