ಮಳವಳ್ಳಿ: ‘ನಟ ಪುನೀತ್ ರಾಜ್ಕುಮಾರ್ ಅವರ ಸಾಮಾಜಿಕ ಕಳಕಳಿ ನಾಡಿಗೆ ಮಾದರಿಯಾಗಿದ್ದು, ಯುವಪೀಳಿಗೆ ಅಳವಡಿಸಿಕೊಳ್ಳಬೇಕು’ ಎಂದು ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಸಲಹೆ ನೀಡಿದರು.

ಪಟ್ಟಣದಲ್ಲಿ ಮಂಗಳವಾರ ಕುಮಾರ್ ಬಾಯ್ಸ್ ಆಯೋಜಿಸಿದ ಪುನೀತ್ ರಾಜ್ ಕುಮಾರ ಅವರ 3ನೇ ವರ್ಷದ ಪುಣ್ಯಸ್ಮರಣೆ ‘ಅಪ್ಪು ಉತ್ಸವ’ ದಲ್ಲಿ ಅವರು ಮಾತನಾಡಿದರು. ರಾಜ್ ಕುಮಾರ್ ಕುಟುಂಬ ಪ್ರತಿ ವರ್ಷ ಮುತ್ತತ್ತಿ ಹಾಗೂ ಶಿವನಸಮುದ್ರ ಮಾರಮ್ಮ ದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಅಭಿಮಾನಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂದರು.

ಪಟ್ಟಣದ ಕುಪ್ಪಸ್ವಾಮಿ ವೃತ್ತದಿಂದ ಗಂಗಾಪರಮೇಶ್ವರಿ ಸಹಕಾರ ಸಂಘದವರೆಗೆ ಅಳವಡಿಸಿದ್ದ ಕನ್ನಡ ಬಾವುಟಗಳು ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಗಳು ಗಮನ ಸೆಳೆದ್ದವು. ಅಲಂಕೃತ ಬೆಳ್ಳಿ ರಥದಲ್ಲಿ ಪುನೀತ್ ಅವರ ಭಾವಚಿತ್ರವ ಇರಿಸಿ, ವಿವಿಧ ಜಾನಪದ ಕಲಾತಂಡಗಳೊಂದಿಗೆ ಸೆಸ್ಕ್ ಕಚೇರಿ ಮುಂಭಾಗದಿಂದ ಕುಪ್ಪಸ್ವಾಮಿ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಅವರ ಹಾಡಿಗೆ ಅಭಿಮಾನಿಗಳು ಕನ್ನಡದ ಬಾವುಟಗಳನ್ನು ಹಿಡಿದು ಕುಣಿ ದರು. ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.

ರಾಶಿರಾಪು ಸಂಘದ ಅಧ್ಯಕ್ಷ ಕೃಷ್ಣ, ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ನಾಗೇಶ್, ಮುಖಂಡರಾದ ಯಜಮಾನ್ ರಾಮಸ್ವಾಮಿ, ಅಣ್ಣಯ್ಯ, ಪ್ರಭು, ಬಸಪ್ಪ, ಕಂಬರಾಜು, ಜಗದೀಶ್, ನಂಜುಂಡ, ಶ್ರೀನಿವಾಸ್, ರವಿ, ಪರಮೇಶ್, ಮಹದೇವು, ಶಿವಕುಮಾರ್, ವೇಣು, ಉಮೇಶ್, ಗುಡ್ಟಪ್ಪ ಮಹದೇವಪ್ಪ, ಉಂತೂರ, ಪುಟ್ಟಸ್ವಾಮಿ, ಪ್ರೆಸ್ ವೆಂಟಕಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.