ಶ್ರೀರಂಗಪಟ್ಟಣ: ‘ಸರ್ಕಾರಿ ಶಾಲೆ, ದೇಗುಲ ಮತ್ತು ರೈತರ ಜಮೀನುಗಳ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಹೆಸರು ತೆಗೆದರೆ ಸಾಲದು; ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ವಕ್ಫ್ ಮಂಡಳಿಯನ್ನು ರದ್ದುಪಡಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸವಾಲು ಹಾಕಿದರು.

ತಾಲ್ಲೂಕಿನ ಮಹದೇವಪುರದ ಚಿಕ್ಕಮ್ಮ– ದೊಡ್ಡಮ್ಮ ದೇವಾಲಯ ಮತ್ತು ಚಂದಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ ನೀಡದ್ದ ಅವರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ‘ಮುಜರಾಯಿ ಆಸ್ತಿ ಸರ್ಕಾರದ್ದು ಎಂದಾದರೆ ವಕ್ಫ್ ಮಂಡಳಿ ಆಸ್ತಿ ಏಕೆ ಸರ್ಕಾರದ್ದಾಗಬಾರದು’ ಎಂದು ಅವರು ಪ್ರಶ್ನಿಸಿದರು.

‘ಕೇಂದ್ರದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ 2013ರಲ್ಲಿ ಮಾಡಿದ ತಪ್ಪಿನಿಂದ ಸಾವಿರಾರು ಎಕರೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಕ್ಫ್ ಮಂಡಳಿಗೆ ಸೇರಿದೆ. ಕಾಂಗ್ರೆಸ್ನ ದೊಡ್ಡ ನಾಯಕರೇ ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ. ಅಂತಹವರನ್ನು ಜೈಲಿಗೆ ಹಾಕಿ. ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಅಶೋಕ್ ಒತ್ತಾಯಿಸಿದರು.

‘ಟಿಪ್ಪು ಮಿದುಳು ಹೊಂದಿರುವ ಸಿದ್ದರಾಮಯ್ಯ ಮುಸ್ಲಿಮರ ಚಾಂಪಿಯನ್ ಆಗಲು ಹೊರಟಿದ್ದಾರೆ. ಅವರ ತುಷ್ಟೀಕರಣ ನೀತಿಯಿಂದ ಹಿಂದೂಗಳು ತೊಂದರೆ ಅನುಭವಿಸುತ್ತಿದ್ದಾರೆ. ಸಚಿವ ಜಮೀರ್ ಅಹಮದ್ಖಾನ್ ಸಿದ್ದರಾಮಯ್ಯ ಹೆಸರಿನಲ್ಲಿ ಮಾಡಬಾರದ್ದನ್ನು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಸನಗೌಡ ಪಾಟೀಲ ಯತ್ನಾಳ ನಡೆಸುತ್ತಿರುವ ಧರಣಿಗೆ ನನ್ನ ಬೆಂಬಲ ಇದೆ. ನಾನೂ ಕೂಡ ಭಾಗವಹಿಸಿ ಬೆಂಬಲ ನೀಡಲಿದ್ದೇನೆ’ ಎಂದು ಅಶೋಕ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ವಕ್ಫ್ ಕಾಯ್ದೆ ತಿದ್ದಪಡಿಯಾಗಬೇಕಾದರೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಸೇರಿಸಿರುವ ಕ್ರಮದ ವಿರುದ್ಧ ಪ್ರಧಾನ ಮಂತ್ರಿಗೆ ಪತ್ರ ಬರೆಯಬೇಕು. ವಾಟ್ಸ್ ಆ್ಯಪ್ ಮತ್ತು ಇ–ಮೇಲ್ ಮೂಲಕವೂ ದೂರು ನೀಡಬೇಕು’ ಎಂದರು.

ಪ್ರಮುಖರಾದ ನಾರಾಯಣಗೌಡ, ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿದರು. ಶಾಸಕ ಮುನಿರಾಜು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಭಾನುಪ್ರಕಾಶ ಶರ್ಮಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್. ರಮೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.