ಹಲಗೂರು: ಈ ಭಾಗದ ಗ್ರಾಮಗಳ ರೈತರ ನೀರಿನ ಬವಣೆ ತಪ್ಪಿಸಲು ಆರಂಭಿಸಿದ ಭೀಮಾ ಜಲಾಶಯ ನೀರಾವರಿ ಯೋಜನೆ ಕಾಮಗಾರಿಯನ್ನು ಉದ್ದೇಶಪೂರ್ವಕವಾಗಿ ಪೂರ್ಣಗೊಳಿಸದಂತೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಅರೋಪಿಸಿದರು.

ಸಮೀಪದ ಬಾಳೆಹೊನ್ನಿಗ ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆ ಪೂಜೆ ಸಲ್ಲಿಸಿ, ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನರ ಎದುರು ಕಣ್ಣೀರು ಸುರಿಸುತ್ತಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ದ್ವೇಷ ರಾಜಕಾರಣದ ಮೂಲಕ ಜನರ ಹಿತಾಸಕ್ತಿಗಳನ್ನು ಬಲಿ ನೀಡುತ್ತಿರುವ ಜೆಡಿಎಸ್ ಪಕ್ಷವನ್ನು ಈ ಬಾರಿ ಸೋಲಿಸಿ, ಜನಪರ ಆಡಳಿತ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ಬಾಳೆ ಹೊನ್ನಿಗ ಗ್ರಾಮದ ಸಿದ್ದರಾಜು ವೆಂಕಟರಮಣಯ್ಯ ಅವರು ಪಿ.ಎಂ.ನರೇಂದ್ರಸ್ವಾಮಿ ಅವರ ಚುನಾವಣಾ ಖರ್ಚಿಗಾಗಿ ₹25 ಸಾವಿರ ನೀಡಿದರು.

ಬಾಳೆಹೊನ್ನಿಗ, ದಳವಾಯಿ ಕೋಡಿಹಳ್ಳಿ, ಅಶ್ರಯ ನಗರ, ದೇವಿರಹಳ್ಳಿ, ಕೆಂಪಯ್ಯನದೊಡ್ಡಿ, ನಂದೀಪುರ, ಗುಂಡಾಪುರ, ಹಾಗಾದೂರು, ಬಸವನಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಂದರ್ ರಾಜು, ಕೆ.ಜೆ.ದೇವರಾಜು, ಶಿವಕುಮಾರ್ ಚೌಡಶೆಟ್ಟಿ, ಕಾರ್ಯಾಧ್ಯಕ್ಷ ಮಲ್ಲಯ್ಯ, ಶಿವಮಾದೇಗೌಡ, ಕಾಂಗ್ರೆಸ್ ಪ.ಜಾ.ವಿಭಾಗದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ಅಶ್ವಿನ್ ಕುಮಾರ್, ಮುಖಂಡರಾದ ಬಿ.ವಿ.ಬಸವರಾಜು, ಬಿ.ವಿ.ಕೃಷ್ಣಪ್ಪ, ಎಚ್.ಆರ್.ಪದ್ಮನಾಭ್, ಎಚ್.ಸಿ.ಕೆಂಪೇಗೌಡ, ದೊಡ್ಡಯ್ಯ, ಕುಂತೂರು ಗೋಪಾಲ್, ಅಂಬರೀಶ್, ರವಿ, ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.