ಮೈಸೂರು: ‘ಅಕ್ಕ ಮಹಾದೇವಿಯ ವೈಚಾರಿಕ ಪ್ರಜ್ಞೆಯ ಬದುಕು ಇಂದಿಗೂ ವಿಸ್ಮಯವಾಗಿದ್ದು, ಅಕ್ಕ ಜಗದ ಸ್ತ್ರೀ ಕುಲದ ಬೆಳಕಾಗಿದ್ದಾರೆ’ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಶ್ರೀರಾಂಪುರಂನ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಅಂಗವಾಗಿ ‘ಅಕ್ಕಮಹಾದೇವಿ ಸದ್ಭಾವನಾ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಸ್ವತಂತ್ರ ಬದುಕಿಗಾಗಿ ವೈವಾಹಿಕ ಬದುಕನ್ನು ನಿರಾಕರಿಸಿ ಸಮಾಜದ ಕಟ್ಟುಪಾಡುಗಳನ್ನು, ನೀತಿ ನಿಯಮಗಳನ್ನು ಧಿಕ್ಕರಿಸಿ, ಉಟ್ಟ ಬಟ್ಟೆಯನ್ನೂ ಕಳಚಿ ಚೆನ್ನಮಲ್ಲಿಕಾರ್ಜುನನನ್ನು ಪತಿಯಾಗಿ ಸ್ವೀಕರಿಸಿ ಸತ್ಯಾನ್ವೇಷಣೆಯ ಹಾದಿಯಲ್ಲಿ ನಡೆದ ಅಕ್ಕನ ಧೀರ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಸಂಕಟ ಸವಾಲುಗಳನ್ನು ಎದುರಿಸಿ ಉತ್ತಮ ಬದುಕನ್ನು ರೂಪಿಸಿಕೊಳ್ಳುವಂತೆ ಮಹಿಳಾ ಸಮೂಹವನ್ನು ಪ್ರೇರೇಪಿಸುತ್ತದೆ’ ಎಂದರು.

ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯ ಶಿಕ್ಷಣಾಧಿಕಾರಿ ಮಂಗಳ ಮುದ್ದು ಮಾದಪ್ಪ ಮತ್ತು ಶರಣ ತತ್ವ ಪ್ರಚಾರಕಿ ಶಾರದಾ ಶಿವಲಿಂಗಸ್ವಾಮಿ ಹಾಗೂ ಪ್ರಕಾಶಕಿ ಎಸ್.ವಿ.ಪವಿತ್ರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚನ್ನಬಸಪ್ಪ ದಂಪತಿಯಿಂದ ವಚನ ಗಾಯನ ನಡೆಯಿತು.

ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್, ಮೈಸೂರು ನಗರ ಘಟಕದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಗು.ಸದಾನಂದಯ್ಯ, ಚಿಂತಕ ಶಾಂತರಾಜೇ ಅರಸ್, ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.