ಮೈಸೂರು: ‘ಟಿಪ್ಪುವನ್ನು ಉರಿಗೌಡ ನಂಜೇಗೌಡರು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು’ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ನೀಡಿದ್ದ ಹೇಳಿಕೆ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ ನೀಡಿದ್ದ ದೂರಿನನ್ವಯ ದೇವರಾಜ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಗುರುವಾರ ಮಂಡ್ಯ ಠಾಣಾ ವ್ಯಾಪ್ತಿಗೆ ವರ್ಗಾಯಿಸಲಾಗಿದೆ.

ಅಶ್ವತ್ಥನಾರಾಯಣ ಈ ಹಿಂದೆ ಸಚಿವರಾಗಿದ್ದಾಗ ಮಂಡ್ಯದ ಸಾತನೂರಿನಲ್ಲಿ ನೀಡಿದ್ದ ಹೇಳಿಕೆಯ ವಿರುದ್ದ ಮೈಸೂರಿನ ಕಾಂಗ್ರೆಸ್ ಮುಖಂಡರು ಫೆ.17ರಂದು ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ.

ಈ ಬಗ್ಗೆ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾನೂನು ಸಲಹೆಗಾರರು ಬುಧವಾರ ಠಾಣೆಗೆ ಬಂದು, ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ, ಎರಡನೇ ದೂರು ಸಲ್ಲಿಸಿದ್ದರು. ‘ಪ್ರಕರಣ ನಡೆದ ಸ್ಥಳದ ಠಾಣಾ ವ್ಯಾಪ್ತಿಗೆ ಪ್ರಕರಣ ವರ್ಗಾಯಿಸಿದ್ದೇವೆ’ ಎಂದು ದೇವರಾಜ ಠಾಣಾ ಇನ್ಸ್ಪೆಕ್ಟರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.