ಮೈಸೂರು: ನಗರದ ರಾಮಾನುಜ ಮುಖ್ಯ ರಸ್ತೆಯ ಅಕ್ಕಮ್ಮಣ್ಣಿ ಆಸ್ಪತ್ರೆ ಎದುರು ತಾಳ ವಾದ್ಯ ಪ್ರತಿಷ್ಠಾನದ ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ‘ಸಂಗೀತಮಯ’ವಾಗಿ ವಿಶೇಷವಾಗಿ ಸೋಮವಾರ ಆಚರಿಸಲಾಯಿತು.

ಆ ಶಾಲೆಯ ಮಕ್ಕಳು ಪಂಚ ತಾಳವಾದ್ಯಗಳ ಪ್ರದರ್ಶನ (ಐದು ಡ್ರಮ್ಸ್)ವನ್ನು ನೀಡಿದರು. ರಾಷ್ಟ್ರ ಗೀತೆ ಮತ್ತು ದೇಶ ಭಕ್ತಿ ಗೀತೆಗಳ ವಾದ್ಯ ಸಂಗೀತವನ್ನು ಪ್ರಸ್ತುತಪಡಿಸಿ ನೆರೆದಿದ್ದವರನ್ನು ರಂಜಿಸಿದರು. ಜನರ ಗಮನ ಸೆಳೆದರು. ಈ ಮೂಲಕ ಸ್ವಾತಂತ್ರ್ಯ ದಿನವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು. ಮಕ್ಕಳು ಕೆಲ ಹೊತ್ತು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಾದ್ಯ ಬಾರಿಸಿದ್ದು ವಿಶೇಷವಾಗಿತ್ತು.

ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಕಲಾವಿದ ಅಜಯ್ ಶಾಸ್ತ್ರಿ, ಪ್ರಸಾದ್ ಸ್ಕೂಲ್ ಒಫ್ ರಿಧಮ್ಸ್ ಸಂಸ್ಥಾಪಕ ಡಾ.ಸಿ.ಆರ್.ರಾಘವೇಂದ್ರ ಪ್ರಸಾದ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.